ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

KAS ಪರೀಕ್ಷೆಯ ತಯಾರಿ

KAS ಪರೀಕ್ಷೆಯ ತಯಾರಿಗಾಗಿ ಅಭ್ಯರ್ಥಿಯಲ್ಲಿ ಈ ಕೆಳಗಿನ ಗುಣಗಳು ಇರಬೇಕು. * ಕೆ.ಎ.ಎಸ್. ಅಧಿಕಾರಿಯಾಬೇಕೆಂಬ ಬಲವಾದ ಆಸಕ್ತಿ ಇರಬೇಕು. ಏನೋ ಒಂದು ಕೈ ನೋಡುತ್ತೇನೆಂಬ ಭಾವನೆ ಇರಬಾರದು. ನೂರಕ್ಕೆ ನೂರರಷ್ಟು ಉತ್ಸಾಹ ಹಾಗೂ ಛಲ ಇರಬೇಕು. * ಪರೀಕ್ಷೆ ತಯಾರಿ ಮಾಡುವುದು ಬೇರೆ. ಅದರಲ್ಲಿ ಇಳಿಯುವುದು ಬೇರೆ. ಇಲ್ಲಿ ಪರೀಕ್ಷೆಗಾಗಿ ಆಳವಾದ ಅಧ್ಯಯನ ಮಾಡಬೇಕು. ಸಮುದ್ರ ಮೇಲ್ಗಡೆ ತೆರೆಗಳು ಹೆಚ್ಚಾಗಿ ಇರುವುವು. ಆದರೆ ಒಳಗೆ ಹೋದಂತೆ ಅಲ್ಲಿ ಪ್ರಶಾಂತತೆ ಇರುವುದು. ಅದೇ ರೀತಿ ಮೇಲ್ನೋಟಕ್ಕೆ ತಯಾರಿ ನಡೆಸಿದಾಗ ಮೈಂಡ್ ಡಿಸ್ಟರ್ಬ್ ಜಾಸ್ತಿ ಇರುವುದು. ಅದರಲ್ಲಿ ಆಳವಾಗಿ ತೊಡಗಿದಾಗ ನಮ್ಮ ಓದಿಗೆ ಡಿಸ್ಟರ್ಬ್ ಕಡಿಮೆಯಾಗುವುದು. * ಪರೀಕ್ಷೆಗಾಗಿ ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಾಗ, ಅದರಿಂದ ಹೊರಗೆ ಬರಬಾರದು. ಅದನ್ನು ದೃಢತೆ ಎನ್ನುವರು. ದೃಢವಾದ ಮನಸ್ಸು ಇಟ್ಟು ತಯಾರಿ ನಡೆಸಬೇಕು. ಕೆಲವರು ಕೆ.ಎ.ಎಸ್. ಪರೀಕ್ಷೆಗಾಗಿ ಪೂರ್ಣ ತಯಾರಿ ನಡೆಸಿದ್ದಾಗ, ಇನ್ನೊಂದು ಪರೀಕ್ಷೆ ಕಾಲ್ ಫಾರ್ಂ ಆದ ಕೂಡಲೇ ಕೆ.ಎ.ಎಸ್. ಅಲ್ಲೇ ಬಿಟ್ಟು ಇನ್ನೊಂದು ಪರೀಕ್ಷೆಗೂ ತಯಾರಿ ನಡೆಸುತ್ತಾರೆ. ಅದನ್ನು ಪೂರ್ಣಗೊಳಿಸದೆ, ಮತ್ತೊಂದು ಪರೀಕ್ಷೆಗೆ ಜಿಗಿಯುತ್ತಾರೆ. ಇಂಥವರು ಯಾವ ಪರೀಕ್ಷೆಯಲ್ಲಿಯೂ ಯಶಸ್ವಿಯಾಗುವುದಿಲ್ಲ. * ಇಂಥ ಪರೀಕ್ಷೆ ತಯಾರಿ ನಡೆಸಿದಾಗ ನಿಮ್ಮ ಮನಸ್ಸನ್ನು ಆಕರ್ಷಣೆಯಿಂದ ದೂರ ಇಡಬೇಕು. ಆಕರ್ಷಣೆಗೆ ಒಳಗಾಗಿ ಓದುತ್ತಾ ಇದ್ದಾಗ ಅಭ್ಯಾಸ ಪರಿಪೂರ್ಣವ...

ಮಹಾತ್ಮಾ ಗಾಂಧಿ ಅವರ 67ನೇ ಪುಣ್ಯ ತಿಥಿ

ಮಹಾತ್ಮಾ ಗಾಂಧಿ ಅವರ 67ನೇ ಪುಣ್ಯ ತಿಥಿ:~             ★ ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ್ಯ ಗಳಿಸಿಕೊಟ್ಟು ಇಡೀ ಜಗತ್ತಿಗೆ ಮಾದರಿಯಾದ ಮಹಾನ್‌ ಚೇತನ ಮೋಹನದಾಸ ಕರಮಚಂದ ಗಾಂಧಿ. ಸಂಘಟನೆ, ಹೋರಾಟ, ನಿರಶನ, ಸ್ವದೇಶಿ ಪ್ರವೃತ್ತಿ ಮೈಗೂಡಿಸಿಕೊಂಡಿದ್ದ ಗಾಂಧೀಜಿ ಚಳವಳಿ ನಡೆಸುತ್ತಾರೆ ಎಂದರೆ ಸಾಕು ಬ್ರಿಟಿಷರಿಗೆ ತಲೆ ಬಿಸಿಯಾಗುತ್ತಿತ್ತು. ಏಕೆಂದರೆ ಗಾಂಧಿ ಅವರ ಒಂದು ಕರೆಗೆ ಓಗೊಟ್ಟು ದೇಶದ ಸಮಸ್ತ ನಾಗರಿಕರು ಅವರೊಟ್ಟಿಗೆ ಹಜ್ಜೆಹಾಕುತ್ತಿದ್ದರು. ಹೌದು, 'ಗಾಂಧಿ' ಎಂಬ ಪದದಲ್ಲಿ ಆ ತಾಕತ್ತು ಇತ್ತು.          ★ ಯಾವುದೇ ಶಸ್ತ್ರಾಸ್ತ್ರವಿಲ್ಲದೆ, ಪ್ರಚೋದನಕಾರಿ ಭಾಷಣ ಮಾಡದೆ, ಯುದ್ಧ, ಕ್ರಾಂತಿಕಾರಿ ಹೆಜ್ಜೆಯನ್ನಿಡದೆ ಕೇವಲ ಚಳವಳಿ, ನಿರಶನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್‌ ನಾಯಕ ಗಾಂಧೀಜಿ. ಆದರೆ ಇಷ್ಟೆಲ್ಲಾ ಹೋರಾಟ ಮಾಡಿದರೂ ಸ್ವತಂತ್ರ ಭಾರತದಲ್ಲಿ 6 ತಿಂಗಳ ಕಾಲ ಅವರು ಜೀವಂತವಾಗಿ ಉಳಿಯಲು ಸಾಧ್ಯವಾಗಲಿಲ್ಲ. ಜನವರಿ 30 ಗಾಂಧೀಜಿ ಅವರ ಪುಣ್ಯತಿಥಿ. ಈ ದಿನ ಬಂತೆಂದರೆ ಸಾಕು ಗಾಂಧೀಜಿ ಜೊತೆಗೆ ನಾಥೂರಾಮ್‌ ವಿನಾಯಕ ಗೋಡ್ಸೆ ಎಂಬ ವ್ಯಕ್ತಿಯ ಹೆಸರನ್ನು ಕೂಡ ಈ ದೇಶ ನೆನಪಿಸಿಕೊಳ್ಳುತ್ತದೆ.      ★ ಗೋಡ್ಸೆಗೇಕೆ ಗಾಂಧಿ ಮೇಲೆ ಸಿಟ್ಟು?:- ತನ್ನ ಆಡಳಿತವನ್ನೇ ಕಿತ್ತು...

ಸಾಮಾನ್ಯ ಜ್ಞಾನ(General Knowledge):

ಸಾಮಾನ್ಯ ಜ್ಞಾನ(General Knowledge): ★ ಸಾಮಾನ್ಯ ಜ್ಞಾನ(General Knowledge): 1) ಕರ್ನಾಟಕ ರಾಜ್ಯದ ವೃಕ್ಷ ಎಂದು ಪರಿಗಣಿಸಲಾಗಿರುವ ಮರ: * ಶ್ರೀಗಂಧ ಮರ. 2) ಭಾರತದಲ್ಲಿ ಅತ್ಯಂತ ಒಣಭೂಮಿ ಇರುವ ಸ್ಥಳ: * ಜೈಸಲ್ಮೇರ್ 3) "Kurukshetra to Kargil " ಎಂಬ ಇತ್ತೀಚಿನ ಕೃತಿ ಬರೆದವರು : * ಕುಲ್ ದೀಪ್ ಸಿಂಗ್.  4) ವಿಶ್ವ ವ್ಯಾಪಾರ ಸಂಸ್ಥೆಯ (WTO) 156ನೇಯ ಸದಸ್ಯತ್ವವನ್ನು ಪಡೆದ ದೇಶ; * ರಷ್ಯಾ. 5) ಚೀನಾ ದೇಶವನ್ನು ಆಳಿದ ಕೊನೆಯ ರಾಜವಂಶ: * ಮಂಚು. 6) ಮೌಂಟ್ ಏವ್ಹರೇಸ್ಟ್ ಶಿಖರವನ್ನು ಏರಿದ ಪ್ರಥಮ ವಿಕಲಚೇತನ ಮಹಿಳೆ: * ಅರುನಿಮಾ ಸಿನ್ಹಾ. 7) ಸಿಸ್ಟೈಟಿಸ್ ಎಂಬ ಸೊಂಕು ಯಾವ ಅಂಗಾಂಗಕ್ಕೆ ಸಂಬಂಧಿಸಿದೆ ? * ಮೂತ್ರ ಕೋಶ. 8) UHF ಪಟ್ಟಿಯ ಆವರ್ತಾಂಕ ವ್ಯಾಪ್ತಿ: * 300 ರಿಂದ 3000 ಮೆಗಾಹರ್ಟ್ಜ್.  9) ಜೀವಂತ ದೇಹದಲ್ಲಿನ ಅತೀ ಕಡಿಮೆ ಇರುವ ಧಾತು: * ಮ್ಯಾಂಗನೀಸ್. 10)ಪರ್ಯಾಯ ನೋಬೆಲ್ ಎಂದು ಪರಿಗಣಿಸಲ್ಪಡುವ ಬಹುಮಾನ: * ರೈಟ್ ಲೈವಿಲಿ ಹುಡ್ ಪ್ರಶಸ್ತಿ. 11) ವಿಶ್ವ ಮಾನಸಿಕ ಆರೊಗ್ಯ ದಿನ: ★ ಅಕ್ಟೋಬರ್ 10. 12) 'ಸಂಯುಕ್ತ ಪಾಣಿಗ್ರಹ' ಯಾವ ನೃತ್ಯ ಪದ್ಧತಿಗೆ ಪ್ರಸಿದ್ಧವಾಗಿದೆ? ★ ಮಣಿಪುರಿ. 13) ಅತೀ ಉದ್ದವಾದ ನರತಂತು ಎಷ್ಟು ಸೆಂ.ಮೀ. ಉದ್ದವಿರುತ್ತದೆ.? ★ 100 cm. 14) ನೀರು ಗಡುಸಾಗಲು ಮುಖ್ಯ ಕಾರಣವಾದ ಲವಣ? ★ ಸೋಡಿಯಂ ಕ್ಲೋರೈಡ್. 15) " ದಿವಾನ್ -ಈ -ಬಂದಗನ್ ...

ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ.

ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ. #ಭಾರತದಲ್ಲಿ_ಬ್ಯಾಂಕಿಂಗ್_ವ್ಯವಸ್ಥೆ ಬ್ಯಾಂಕಿನ ಅರ್ಥ : --- ಬ್ಯಾಂಕುಗಳು ಎಂದರೆ ಸಾರ್ವಜನಿಕರಿಂದ ಠೇವಣೀಯನ್ನು ಸ್ವೀಕಾರ ಮಾಡುವ & ಸಾರ್ವಜನಿಕರಿಗೆ ಸಾಲ ನೀಡುವ ಹಣಕಾಸಿನ ಸಂಸ್ಥೆಗಳನ್ನು ಬ್ಯಾಂಕುಗಳೆಂದು ಕರೆಯುತ್ತಾರೆ. • ಬ್ಯಾಂಕ್ ಆಫ್ ಹಿಂದೂಸ್ತಾನ್ : ಭಾರತದಲ್ಲಿ ಸ್ಥಾಪನೆಯಾದ ಮೊದಲ ಬ್ಯಾಂಕ್. • ಔಧ ಕಮರ್ಷಿಯಲ್ ಬ್ಯಾಂಕ್ : ಭಾರತೀಯರಿಂದ ಸ್ಥಾಪಿತವಾದ ಮೊದಲ ಬ್ಯಾಂಕ್. • ಪಂಜಾಬ್ ನ್ಯಾಷನಲ್ ಬ್ಯಾಂಕ್ : ಸಂಪೂರ್ಣವಾಗಿ ಭಾರತೀಯರ ಆಡಳಿತಕ್ಕೆ ಒಳಪಟ್ಟ ಬ್ಯಾಂಕ್. • HSBC ಬ್ಯಾಂಕ್ : ಭಾರತದಲ್ಲಿ ಸ್ಥಾಪನೆಯಾದ ಮೊದಲ ವಿದೇಶಿ ಬ್ಯಾಂಕ್. • ಕೆನರಾ ಬ್ಯಾಂಕ್ : ISO ಮಾನ್ಯತೆ ಪಡೆದ ಮೊದಲ ಬ್ಯಾಂಕ್. • BANK OF INDIA : ದೇಶದ ಹೊರಗಡೆ ಶಾಖೆಗಳನ್ನು ತೆಗೆದ ಭಾರತದ ಮೊದಲ ಬ್ಯಾಂಕ್. • HSBC BANK : ಭಾರತದಲ್ಲಿ ATM ಪರಿಚಯಿಸದ ಮೊದಲ ಬ್ಯಾಂಕ್. • CITY BANK : ಭಾರತದಲ್ಲಿ ATM ಪರಿಚಯಿಸಿದ ಭಾರತದ ಮೊದಲ ಬ್ಯಾಂಕ್. • ಅಲಹಾಬಾದ ಬ್ಯಾಂಕ್ : ಭಾರತದ ಅತ್ಯಂತ ಹಳೆಯ ಬ್ಯಾಂಕ್. • ಭಾರತೀಯ ಸ್ಟೇಟ್ ಬ್ಯಾಂಕ್ : ಭಾರತದ ಅತ್ಯಂತ ದೊಡ್ಡ ಸಾರ್ವಜನಿಕ ಬ್ಯಾಂಕ್. • ಭಾರತೀಯ ಸ್ಟೇಟ್ ಬ್ಯಾಂಕ್ : ಭಾರತದ ಅತ್ಯಂತ ದೊಡ್ಡ ವಾಣಿಜ್ಯ ಬ್ಯಾಂಕ್. • ICICI BANK : ಭಾರತದ ಖಾಸಗಿ ಒಡೆತನದ ದೊಡ್ಡ ಬ್ಯಾಂಕ್. • ಬಂಗಾಲ ಬ್ಯಾಂಕ್ : ಚೆಕ್ ಸಿಸ್ಟಮ್ ಪರಿಚಯಿಸಿದ ಭಾರತದ ಮೊದಲ ಬ್ಯಾಂಕ್. #...

ಭಾರತದ ಭೂಗೋಳ 1

ಭಾರತದ ಭೂಗೋಳ 1. ಭಾರತವು ಏಷ್ಯಾ ಖಂಡದಲ್ಲಿದೆ. 2. ಭಾರತವು ಭೂಮಿಯ ಉತ್ತರಾರ್ದಗೊಳದಲ್ಲಿದೆ. 3. ಭಾರತದ ಉಪಖಂಡದ ದಕ್ಷಿಣದ ತುದಿ ಇಂದಿರಾ ಪಾಯಿಂಟ. 4. ಇಂದಿರಾ ಪಾಯಿಂಟ ದಿ ಗ್ರೇಟ್ ನಿಕೋಬಾರ್ ದ್ವೀಪದಲ್ಲಿದೆ. 5. ಭಾರತದ ಕೇಂದ್ರ ಭಾಗದಲ್ಲಿ ಹಾದು ಹೋಗುವ ಆಕ್ಷಾಂಶ 23 1/2 ಉತ್ತರ ಅಕ್ಷಾಂಶ. 6. ಭಾರತದ ಅತ್ಯಂತ ದಕ್ಷಿಣದ ಪ್ರದೇಶ ಕನ್ಯಾಕುಮಾರಿ. 7. ಕರ್ಕಾಟಕ ಸಂಕ್ರಾಂತಿ ವೃತ್ತವು ಭಾರತದ 8 ರಾಜ್ಯಗಳ ಮೂಲಕ ಹಾದು ಹೋಗುತ್ತದೆ. ಅವು ಗುಜರಾತ, ರಾಜಸ್ಥಾನ, ಮದ್ಯಪ್ರದೇಶ, ಚತ್ತೀಸಗರ್, ಜಾರ್ಖಂಡ, ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಮಿಜೋರಾಂ ಮೂಲಕ ಹಾದು ಹೋಗುತ್ತದೆ. 8. ಭಾರತದ ಆದರ್ಶ ಕಾಲವನ್ನು 82 1/2 ಡಿಗ್ರಿ ಪೂರ್ವ ರೇಖಾಂಶವನ್ನು ಆಧರಿಸಿ ತಿಳಿಯಲಾಗುತ್ತದೆ. 9. ಭಾರತದ ಒಟ್ಟು ಭೌಗೋಳಿಕ ಕ್ಷೇತ್ರ 32,87,263 ಚ.ಲಿ.ಮೀ (32.87 ಲಕ್ಷ) 10. ಭಾರತದ ಭೂಗಡಿ ರೇಖೆಯ ಉದ್ದ 15,200 ಕಿ ಮೀ 17 ರಾಜ್ಯಗಳು ಗಡಿಗೆ ಹೊಂದಿ ಇದ್ದು. 7 ದೇಶಗಳೊಂದಿಗೆ ಭೂ ಗಡಿಯನ್ನು ಹೊಂದಿದೆ. 11. ಭಾರತದ ಸಮುದ್ರ ತೀರ ಪ್ರದೇಶದ ಉದ್ದ 6,100 ಕಿ ಮೀ ಇದ್ದು. ದ್ವೀಪಗಳನ್ನು ಸೇರಿಸಿ 7,516.6 ಕಿ ಮೀ ಇದೆ. 12. ಭಾರತ ಮತ್ತು ಪಾಕಿಸ್ತಾನದ ಗಡಿ ರೇಖೆಯನ್ನು ರ್ಯಾಡಕ್ಲೀಪ್ ಎನ್ನುವರು. ಭಾರತ ಮತ್ತು ಅಪಘಾನಿಸ್ತಾನದ ಗಡಿ ರೇಖೆಯನ್ನು ಡ್ಯೂರಾಂಡ ಎನ್ನುವರು. ಭಾರತ ಮತ್ತು ಚೈನಾ ಗಡಿ ರೇಖೆಯನ್ನು ಮ್ಯಾಕಮೋಹನ ಎನ್ನುವರು. 13. ಭಾರತ ಮತ್ತು ಶ್ರೀಲಂಕಾವನ್ನು ಪಾಕ್...