ವಿಷಯಕ್ಕೆ ಹೋಗಿ

KAS ಪರೀಕ್ಷೆಯ ತಯಾರಿ

KAS ಪರೀಕ್ಷೆಯ ತಯಾರಿಗಾಗಿ ಅಭ್ಯರ್ಥಿಯಲ್ಲಿ ಈ ಕೆಳಗಿನ ಗುಣಗಳು ಇರಬೇಕು.
* ಕೆ.ಎ.ಎಸ್. ಅಧಿಕಾರಿಯಾಬೇಕೆಂಬ ಬಲವಾದ ಆಸಕ್ತಿ ಇರಬೇಕು. ಏನೋ ಒಂದು ಕೈ ನೋಡುತ್ತೇನೆಂಬ ಭಾವನೆ ಇರಬಾರದು. ನೂರಕ್ಕೆ ನೂರರಷ್ಟು ಉತ್ಸಾಹ ಹಾಗೂ ಛಲ ಇರಬೇಕು.
* ಪರೀಕ್ಷೆ ತಯಾರಿ ಮಾಡುವುದು ಬೇರೆ. ಅದರಲ್ಲಿ ಇಳಿಯುವುದು ಬೇರೆ. ಇಲ್ಲಿ ಪರೀಕ್ಷೆಗಾಗಿ ಆಳವಾದ ಅಧ್ಯಯನ ಮಾಡಬೇಕು. ಸಮುದ್ರ ಮೇಲ್ಗಡೆ ತೆರೆಗಳು ಹೆಚ್ಚಾಗಿ ಇರುವುವು. ಆದರೆ ಒಳಗೆ ಹೋದಂತೆ ಅಲ್ಲಿ ಪ್ರಶಾಂತತೆ ಇರುವುದು. ಅದೇ ರೀತಿ ಮೇಲ್ನೋಟಕ್ಕೆ ತಯಾರಿ ನಡೆಸಿದಾಗ ಮೈಂಡ್ ಡಿಸ್ಟರ್ಬ್ ಜಾಸ್ತಿ ಇರುವುದು. ಅದರಲ್ಲಿ ಆಳವಾಗಿ ತೊಡಗಿದಾಗ ನಮ್ಮ ಓದಿಗೆ ಡಿಸ್ಟರ್ಬ್ ಕಡಿಮೆಯಾಗುವುದು.
* ಪರೀಕ್ಷೆಗಾಗಿ ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಾಗ, ಅದರಿಂದ ಹೊರಗೆ ಬರಬಾರದು. ಅದನ್ನು ದೃಢತೆ ಎನ್ನುವರು. ದೃಢವಾದ ಮನಸ್ಸು ಇಟ್ಟು ತಯಾರಿ ನಡೆಸಬೇಕು. ಕೆಲವರು ಕೆ.ಎ.ಎಸ್. ಪರೀಕ್ಷೆಗಾಗಿ ಪೂರ್ಣ ತಯಾರಿ ನಡೆಸಿದ್ದಾಗ, ಇನ್ನೊಂದು ಪರೀಕ್ಷೆ ಕಾಲ್ ಫಾರ್ಂ ಆದ ಕೂಡಲೇ ಕೆ.ಎ.ಎಸ್. ಅಲ್ಲೇ ಬಿಟ್ಟು ಇನ್ನೊಂದು ಪರೀಕ್ಷೆಗೂ ತಯಾರಿ ನಡೆಸುತ್ತಾರೆ. ಅದನ್ನು ಪೂರ್ಣಗೊಳಿಸದೆ, ಮತ್ತೊಂದು ಪರೀಕ್ಷೆಗೆ ಜಿಗಿಯುತ್ತಾರೆ. ಇಂಥವರು ಯಾವ ಪರೀಕ್ಷೆಯಲ್ಲಿಯೂ ಯಶಸ್ವಿಯಾಗುವುದಿಲ್ಲ.
* ಇಂಥ ಪರೀಕ್ಷೆ ತಯಾರಿ ನಡೆಸಿದಾಗ ನಿಮ್ಮ ಮನಸ್ಸನ್ನು ಆಕರ್ಷಣೆಯಿಂದ ದೂರ ಇಡಬೇಕು. ಆಕರ್ಷಣೆಗೆ ಒಳಗಾಗಿ ಓದುತ್ತಾ ಇದ್ದಾಗ ಅಭ್ಯಾಸ ಪರಿಪೂರ್ಣವಾಗುವುದಿಲ್ಲ. ಮುಗ್ಧ ಮನಸ್ಸು ಏಕಾಗ್ರತೆಗೊಳ್ಳುವುದಿಲ್ಲ. ಯಾವುದೋ ಭಾವಲೋಕದಲ್ಲಿ ಓದುತ್ತಾ ಇರುವುವರು ಅವರು ಎಷ್ಟೇ ಗಂಟೆ ಓದಿದರೂ ಕೂಡಾ, ತಾವು ಯಾವುದು ಓದಿದ್ದು ಎಂಬುದು ಗೊತ್ತಿರುವುದಿಲ್ಲ.
* ಈ ಪರೀಕ್ಷೆಗೆ ಏಷ್ಟು ಗಂಟೆ ತಯಾರಿ ನಡೆಸಬೇಕು ಎಂಬ ಪ್ರಶ್ನೆ ಬಹಳಷ್ಟು ಅಭ್ಯರ್ಥಿಗಳ ಪ್ರಶ್ನೆಯಾಗಿದೆ. ನನ್ನ ಪ್ರಕಾರ ಕನಿಷ್ಠ ೧೨ ರಿಂದ ೧೪ ತಾಸು ಓದಬೇಕು. ಕೆಲವರಿಗೆ ಗಾಬರಿಯಾಗಬಹುದು. ಇದಕ್ಕಿಂತ ಕಡಿಮೆ ಅವಧಿಯನ್ನು ತೆಗೆದುಕೊಂಡರೆ, ವಿಷಯವನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲವೆನೋ ಎಂದು ಕೆಲವರು ಹೇಳುವ ಪ್ರಕಾರ ಎಷ್ಟು ಗಂಟೆ ಓದುವುದು ಮುಖ್ಯವಲ್ಲ ಎಷ್ಟು ವಿಷಯ ತಿಳಿದುಕೊಂಡೆವು ಎಂಬುವುದು ಮುಖ್ಯವಾಗುತ್ತದೆ. ಆದರೆ, ಅಧ್ಯಯನಕ್ಕೆ ಕೂಡುವ ಅವಧಿ ಹೆಚ್ಚಿದಂತೆ, ಸಹಜವಾಗಿ ಏಕಾಗ್ರತೆ ಹಾಗೂ ಅರ್ಥ ಮಾಡಿಕೊಳ್ಳುವುದು.
* ಸಾಮಾನ್ಯವಾಗಿ ಯಾವ ಸಮಯದಲ್ಲಿ ಓದಬೇಕು ಎಂಬುದು ಮತ್ತೊಂದು ಪ್ರಶ್ನೆಯಾಗಿದೆ. ಇಲ್ಲಿ ಯಾವ ಸಮಯದಲ್ಲಿ ಓದುತ್ತೇನೆ ಎಂಬುದು ಮುಖ್ಯವಲ್ಲ. ಯಾವುದೇ ಸಮಯದಲ್ಲಿ ಓದಿ ಆದರೆ, ಮನಸ್ಸು ಕೊಟ್ಟು ಅಧ್ಯಯನ ಮಾಡಿ. ಸಾಮಾನ್ಯವಾಗಿ ಇಂಥ ಪರೀಕ್ಷೆಗೆ ತಯಾರಿ ನಡೆಸುವವರು ರಾತ್ರಿಯೇ ಹೆಚ್ಚು ಅಧ್ಯಯನ ಮಾಡುತ್ತಾರೆ.
* ಈ ಪರೀಕ್ಷೆಗೆ ವಿಶೇಷ ತಯಾರಿ ಹಾಗೂ ಪರಿಶ್ರಮ ಬೇಕಾಗುವುದು. ಅದಕ್ಕಾಗಿ ಸಹನೆ ಇರಬೇಕು. ನಿರಂತರ ಓದುತ್ತಾ ಇದ್ದಾಗ, ಅದನ್ನು ಬಿಟ್ಟು ಓಡಿಹೋಗೋಣ ಎಂಬ ಮನಸ್ಸು ಬರುತ್ತದೆ. ಕೆಲವರು ೧೧ನೇ ಹೆಜ್ಜೆವರೆಗೆ ಬಂದಿರುತ್ತಾರೆ. ಇನ್ನೊಂದು ಹೆಜ್ಜೆ ಇಟ್ಟರೆ, ಗುರಿ ಮುಟ್ಟಲು ಸಾಧ್ಯವಿರುತ್ತದೆ. ಅದನ್ನು ಗುರ್ತಿಸದೆ, ಸಹನೆ ಕಳೆದುಕೊಂಡು ಸ್ಪರ್ಧೆಯಿಂದ ಹಿಂದಕ್ಕೆ ಸರಿಯುತ್ತಾರೆ. ಓಡಿ ಹೋಗುತ್ತಾರೆ.
* ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಗೆ ತಯಾರಿ ಮಾಡುವಾಗ ನಮ್ಮ ಓದು ಎಷ್ಟು ಮುಖ್ಯವಾಗಿರುತ್ತದೆ. ಅಷ್ಟೇ ಮುಖ್ಯ ನಮಗೆ ಪ್ರೇರಣೆ ಹಾಗೂ ಸ್ಫೂರ್ತಿ. ಅದಕ್ಕಾಗಿ ಈಗಾಗಲೇ ಯಶಸ್ವಿಯಾದವರ ಸಂದರ್ಶನ ಓದಿ ಹಾಗೂ ಕೆ.ಎ.ಎಸ್. ಪರೀಕ್ಷೆಗೆ ಸಂಬಂಧಪಟ್ಟ ಸೆಮಿನಾರ್‌ಗಳಲ್ಲಿ ಪಾಲ್ಗೊಳ್ಳುವುದರಿಂದ ನಿಮ್ಮ ಮನಸ್ಸು ಗಟ್ಟಿಯಾಗುತ್ತದೆ. ನಮ್ಮ ಸ್ಪರ್ಧಾ ಚಾಣಕ್ಯ ಪತ್ರಿಕೆಯಲ್ಲಿ ಪ್ರತಿ ತಿಂಗಳು ಸಾಧಕರ ಬಗ್ಗೆ ಪ್ರಕಟಿಸಿದ್ದೇವೆ. ಒಮ್ಮೆ ಓದಿ ನೋಡಿ. ಸಾಧಿಸಲು ಅವರು ತೆಗೆದುಕೊಂಡ ಸಮಯ, ಯಶಸ್ಸಿಗಾಗಿ ಪಟ್ಟ ಪರಿಶ್ರಮ ಎಲ್ಲವೂ ಗೊತ್ತಾಗುತ್ತದೆ.
* ಓದುವಾಗ ಯಾವುದೇ ವಿಷಯ ತಿಳಿಯದಿದ್ದಾಗ ಗಾಬರಿಯಾಬೇಡಿ. ಎಲ್ಲರಿಗೂ ಎಲ್ಲಾ ವಿಷಯ ಗೊತ್ತಿರುವುದಿಲ್ಲ. ಯಾಕೆಂದರೆ ಯಾರೂ ಇಲ್ಲಿಯವರೆಗೆ ೧೦೦ಕ್ಕೆ ೧೦೦ ಅಂಕಗಳನ್ನು ತೆಗೆದುಕೊಂಡ ಉದಾಹರಣೆ ಇಲ್ಲ. ಕೆಲವರು ಒಂದೂ ಪ್ರಶ್ನೆ ಬರದಿದ್ದಾಗ ನಾನು ದಡ್ಡನೆಂಬ ಭಾವನೆ ಬೆಳೆಸಿಕೊಂಡು ಉತ್ಸಾಹ ಕಳೆದುಕೊಳ್ಳುತ್ತಾರೆ.
* ಕೆಲವರಿಗೆ ಈ ಪರೀಕ್ಷೆ ಎಂದರೆ ಪುಸ್ತಕಗಳನ್ನು ಸಂಗ್ರಹಿಸುವುದು ಎಂದು ತಿಳಿದುಕೊಂಡು ಎಲ್ಲಾ ಪುಸ್ತಕಗಳನ್ನು ಖರೀದಿಸುತ್ತಾರೆ. ಆದರೆ, ಯವುದನ್ನು ಪೂರ್ಣವಾಗಿ ಓದುವುದಿಲ್ಲ. ಉತ್ತಮ ಪುಸ್ತಕಗಳು ಇದ್ದರೆ ಸಾಕು. ಮುಂದಿನ ಸಂಚಿಕೆಯಲ್ಲಿ ಕೆ.ಎ.ಎಸ್. ಪರೀಕ್ಷೆ ತಯಾರಿಗೆ ಇರುವ ಉತ್ತಮ ಪುಸ್ತಕಗಳ ಪಟ್ಟಿಯನ್ನು ಪ್ರಕಟಿಸುತ್ತೇವೆ.
* ಉನ್ನತ ಪರೀಕ್ಷೆ ಬರೆಯಬೇಕಾದರೆ ಅಧ್ಯಯನದ ಕೊಠಡಿಯು ಕೂಡ ಅಷ್ಟೇ ಉತ್ತಮವಾಗಿರಬೇಕು. ಅಲ್ಲಿಯ ವಾತಾವರಣ ಬಹಳ ಚೆನ್ನಾಗಿರಬೇಕು. ಒಂದು ವೇಳೆ ನೀವು ಇರುವ ರೂಮಿನಲ್ಲಿ ಎಲ್ಲರೂ ಕೆ.ಎ.ಎಸ್. ಆಕಾಂಕ್ಷಿಗಳು ಇದ್ದರೆ ಚೆಂದ. ಬೇರೆ ಪರೀಕ್ಷೆಗೆ ತಯರಾಗುವವರ ಜೊತೆ ಇರಬಾರದು. ಯಾಕೆಂದರೆ, ನಿಮ್ಮದೇ ಕೆ.ಎ.ಎಸ್. ವಾತಾವರಣ ಇರುವುದಿಲ್ಲ. ಹಾಗೂ ಸ್ಫೂರ್ತಿ ಉಂಟಾಗುವುದಿಲ್ಲ.
* ಬೇರೆಯವರು ಓದುವುದನ್ನು ನೋಡಿ, ಅವರ ಪುಸ್ತಕಗಳ ಸಂಗ್ರಹ ನೋಡಿ, ಅವರ ಚರ್ಚೆಯನ್ನು ನೋಡಿ ನೀವು ಗಾಬರಿಯಾಗಬೇಡಿ. ಯಾವತ್ತೂ ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳಬೇಡಿ. ಓದುವಾಗ ನಿಮ್ಮದೇ ಶೈಲಿ ರೂಢಿಸಿಕೊಂಡು ಓದಬೇಕು.
* ಓದುವಾಗ ಮುಖ್ಯವಾದ ವಿಷಯಗಳನ್ನು ಕುರಿತು ನಿಮ್ಮದೇ ಆದ ನೋಟ್ಸ್ ಮಾಡಿಕೊಳ್ಳುವುದು ಉತ್ತಮ. ಸಮಯ ಇರದಿದ್ದಾಗ ಮಾತ್ರ ಪುಸ್ತಕದಲ್ಲಿ ಅಂಡರಲೈನ್ ಮಾಡಿಕೊಳ್ಳಿ. ಇದರಿಂದ ವೇಗವಾಗಿ ಪುನರ್ ಅಧ್ಯಯನ ಮಾಡಲು ಹಾಗೂ ನೆನಪಿಟ್ಟುಕೊಳ್ಳಲು ಸುಲಭವಾಗುತ್ತದೆ.
* ಇದಕ್ಕಾಗಿ ಗೆಳೆಯರ ಗುಂಪು ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಏಕಾಂಗಿ ಓದಬೇಡಿ. ಗುಂಪು ಚರ್ಚೆ ಮಾಡುವಾಗ ಹೊಸ ಹೊಸ ವಿಷಯ ತಿಳಿಯುವುದು ಅಲ್ಲದೆ ಚರ್ಚೆ ಮಾಡಿದ ವಿಷಯವು ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ.
* ಚರ್ಚೆ ಹರಟೆಯಾಗಬಾರದು. ಓದು ಆಯಾಸವಾಗಬಾರದು ಹಾಗೂ ನಿರಂತರ ಉತ್ಸಾಹ ನಿಮ್ಮಲ್ಲಿ ಇರಬೇಕಾದರೆ, ಪ್ರತಿನಿತ್ಯ ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ವರ್ಣಮಾಲೆ

ವರ್ಣಮಾಲೆ ಮತ್ತು ಧ್ವನ್ಯಂಗಗಳು ಕನ್ನಡ ವರ್ಣಮಾಲೆ         ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ. ಅವುಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು. •ಸ್ವರಗಳು ಮತ್ತು ಸಂಧ್ಯಕ್ಷರಗಳು (13) •ಯೋಗವಾಹಕಗಳು (2) •ವ್ಯಂಜನಗಳು (34) ಸ್ವರಗಳು: (ಒಟ್ಟು-13) "ಸ್ವತಂತ್ರವಾದ, ಸ್ಪಷ್ಟವಾದ ಉಚ್ಚಾರಣೆಯನ್ನು ಹೊಂದಿರುವ ಅಕ್ಷರಗಳನ್ನು 'ಸ್ವರಗಳು' ಎಂದು ಕರೆಯಲಾಗುತ್ತದೆ." ಕನ್ನಡ ವರ್ಣಮಾಲೆಯಲ್ಲಿ ಒಟ್ಟು 13 ಸ್ವರಗಳಿದ್ದು ಅವುಗಳಲ್ಲಿ ಎರಡು ಅಕ್ಷರಗಳನ್ನು ಸಂಧ್ಯಕ್ಷರಗಳೆಂದೂ ಕರೆಯಲಾಗುತ್ತದೆ. ಅವುಗಳೆಂದರೆ:- ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ       ಸ್ವರಗಳನ್ನು 'ಹ್ರಸ್ವಸ್ವರ' 'ಧೀರ್ಘಸ್ವರ' ಮತ್ತು 'ಸಂಧ್ಯಕ್ಷರ' ಎಂದು ಮೂರು ವಿಧಗಳಾಗಿ ವಿಂಗಡಿಸಬಹುದು. * ಹ್ರಸ್ವಸ್ವರಗಳು:-  ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ಹ್ರಸ್ವಸ್ವರಗಳು ಎನ್ನುವರು.  -ಅವುಗಳೆಂದರೆ- ಅ ಇ ಉ ಋ ಎ ಒ (ಒಟ್ಟು 6) * ಧೀರ್ಘಸ್ವರಗಳು:- ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ಧೀರ್ಘಸ್ವರಗಳು ಎನ್ನುವರು. ಅವುಗಳೆಂದರೆ- ಆ ಈ ಊ ಏ ಐ ಓ ಔ (ಒಟ್ಟು 7) [ಟಿಪ್ಪಣಿ:- ಯಾವುದೇ ಒಂದು ಅಕ್ಷರವನ್ನು ಉಚ್ಚರಿಸಲು ತೆಗೆದುಕೊಳ್ಳುವ ಸಮಯವನ್ನು ಮಾತ್ರೆಗಳಿಂದ ಅಳೆಯಲಾಗುತ್ತದೆ. 'ಅ' ಎಂಬ ಅಕ್ಷರವನ್ನು ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿ...

☼ ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು ☼

☼ ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು ☼ ☼ ಆಂದ್ರಪ್ರದೇಶ 1.ವಿಶಾಖಪಟ್ಟಣ     --  ಭಾಗ್ಯನಗರ,(city of destiny) 2.ವಿಜಯವಾಡ      --  ಗೆಲುವಿನ ಸ್ಥಾನ (place of victory)  3.ಗುಂಟುರು          --  ಮೆಣಸಿನಕಾಯಿಗಳ ನಗರ, ಮಸಾಲೆ ನಗರ ☼ ಉತ್ತರಪ್ರದೇಶ 1.ಆಗ್ರಾ             --  ತಾಜನಗರಿ 2.ಕಾನ್ಪುರ         --  ವಿಶ್ವದ ಚರ್ಮದ ನಗರ, ಉತ್ತರ ಭಾರತದ ಮಾಂಚೆಸ್ಟರ್ 3.ಲಕ್ನೋ          --  ನವಾಬರ ನಗರ (city of nawab's) 4.ಪ್ರಯಾಗ        --  ದೇವರ ಮನೆ 5.ವಾರಾಣಾಸಿ  --  ಭಾರತದ ಧಾರ್ಮಿಕ & ಆಧ್ಯಾತ್ಮಿಕ ನಗರ, ದೀಪಗಳ ನಗರ, ಭೂಮಿಯ ಮೇಲಿರುವಜೀವಂತ    ಹಳೆಯ ನಗರ, ಪವಿತ್ರ ನಗರ ☼ ಗುಜರಾಥ 1. ಅಹಮದಾಬಾದ   --  ಭಾರತದ ಬೋಸ್ಟಾನ್, ಭಾರತದ ಮಾಂಚೆಸ್ಟರ್, 2.ಸೂರತ್          ...

ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳು      ಕನ್ನಡ ವರ್ಣಮಾಲೆಯ ಬಗ್ಗೆ ತಿಳಿದುಕೊಂಡ ನಂತರ ಕಲಿಯಬೇಕಾದ ಲಿಪಿ ರಚನೆಯ ಪ್ರಮುಖ ಭಾಗವೆಂದರೆ ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳದ್ದು. ಇವುಗಳ ಬಗ್ಗೆ ವಿವರವಾಗಿ ತಿಳಿಯೋಣ.        ನೀವು  ಕಾಗುಣಿತ ಎಂಬ ಪದವನ್ನು ಕೇಳಿದ್ದೀರಿ. ವರ್ಣಮಾಲೆಯಲ್ಲಿ ಕ್ ಇಂದ ಳ್ ವರೆಗಿನ 34 ಅಕ್ಷರಗಳಿಗೆ ಬೇರೆಬೇರೆ ಸ್ವರಗಳನ್ನು ಸೇರಿಸಿ ಬೇರೆಬೇರೆ ಅಕ್ಷರಗಳನ್ನು ಪಡೆಯಬಹುದು. ಈ ಪ್ರಕ್ರಿಯೆ ಕ್ ಅಕ್ಷರದಿಂದ ಆರಂಭವಾಗುವುದರಿಂದ ಇವುಗಳಿಗೆ ಕಾಗುಣಿತ ಎಂಬ ಹೆಸರು ಬಂದಿದೆ. ಇದನ್ನು ಅನೇಕ ಕಡೆ 'ಬಳ್ಳಿ' ಎಂದೂ ಕರೆಯುತ್ತಾರೆ. ಇದು ಸೂಕ್ತವೂ ಹೌದು. ಏಕೆಂದರೆ ಕ್ ಇಂದ ಳ್ ವರೆಗಿನ 34 ಅಕ್ಷರಗಳಿಗೆ ವಿವಿಧ ಸ್ವರಗಳನ್ನು ಸೇರಿಸುತ್ತಾ ಹೋದಂತೆ ಅಕ್ಷರಗಳ ಸಂಖ್ಯೆ ಬಳ್ಳಿಯಂತೆ ಬೆಳೆಯುತ್ತಾ ಹೋಗುತ್ತದೆ. ಇವನ್ನೇ ಗುಣಿತಾಕ್ಷರವೆಂದು ಹೇಳಲಾಗುತ್ತದೆ.            ಗುಣಿತಾಕ್ಷರಗಳು "ವ್ಯಂಜನಕ್ಕೆ ಸ್ವರ ಸೇರಿದಾಗ ಗುಣಿತಾಕ್ಷರವಾಗುತ್ತದೆ."     [ವ್ಯಂಜನ  +   ಸ್ವರ   =   ಗುಣಿತಾಕ್ಷರ] ಉದಾಹರಣೆಗೆ:-  ಕ್ ವ್ಯಂಜನಕ್ಕೆ ಬೇರೆ ಬೇರೆ ಸ್ವರಗಳನ್ನು ಸೇರಿಸೋಣ.     ...