ವಿಷಯಕ್ಕೆ ಹೋಗಿ

ಕನ್ನಡ ವರ್ಣಮಾಲೆ

ವರ್ಣಮಾಲೆ ಮತ್ತು ಧ್ವನ್ಯಂಗಗಳು




ಕನ್ನಡ ವರ್ಣಮಾಲೆ
        ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ. ಅವುಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು.
•ಸ್ವರಗಳು ಮತ್ತು ಸಂಧ್ಯಕ್ಷರಗಳು (13)
•ಯೋಗವಾಹಕಗಳು (2)
•ವ್ಯಂಜನಗಳು (34)
ಸ್ವರಗಳು: (ಒಟ್ಟು-13) "ಸ್ವತಂತ್ರವಾದ, ಸ್ಪಷ್ಟವಾದ ಉಚ್ಚಾರಣೆಯನ್ನು ಹೊಂದಿರುವ ಅಕ್ಷರಗಳನ್ನು 'ಸ್ವರಗಳು' ಎಂದು ಕರೆಯಲಾಗುತ್ತದೆ." ಕನ್ನಡ ವರ್ಣಮಾಲೆಯಲ್ಲಿ ಒಟ್ಟು 13 ಸ್ವರಗಳಿದ್ದು ಅವುಗಳಲ್ಲಿ ಎರಡು ಅಕ್ಷರಗಳನ್ನು ಸಂಧ್ಯಕ್ಷರಗಳೆಂದೂ ಕರೆಯಲಾಗುತ್ತದೆ.
ಅವುಗಳೆಂದರೆ:- ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ
      ಸ್ವರಗಳನ್ನು 'ಹ್ರಸ್ವಸ್ವರ' 'ಧೀರ್ಘಸ್ವರ' ಮತ್ತು 'ಸಂಧ್ಯಕ್ಷರ' ಎಂದು ಮೂರು ವಿಧಗಳಾಗಿ ವಿಂಗಡಿಸಬಹುದು.
* ಹ್ರಸ್ವಸ್ವರಗಳು:-  ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ಹ್ರಸ್ವಸ್ವರಗಳು ಎನ್ನುವರು. 
-ಅವುಗಳೆಂದರೆ- ಅ ಇ ಉ ಋ ಎ ಒ (ಒಟ್ಟು 6)
* ಧೀರ್ಘಸ್ವರಗಳು:- ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ಧೀರ್ಘಸ್ವರಗಳು ಎನ್ನುವರು. ಅವುಗಳೆಂದರೆ- ಆ ಈ ಊ ಏ ಐ ಓ ಔ (ಒಟ್ಟು 7)
[ಟಿಪ್ಪಣಿ:- ಯಾವುದೇ ಒಂದು ಅಕ್ಷರವನ್ನು ಉಚ್ಚರಿಸಲು ತೆಗೆದುಕೊಳ್ಳುವ ಸಮಯವನ್ನು ಮಾತ್ರೆಗಳಿಂದ ಅಳೆಯಲಾಗುತ್ತದೆ. 'ಅ' ಎಂಬ ಅಕ್ಷರವನ್ನು ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲಾಗುವುದರಿಂದ ಇದು ಹ್ರಸ್ವಸ್ವರ ವಾಗಿದೆ. ಹಾಗೆಯೇ ಈ ಎಂಬ ಅಕ್ಷರವನ್ನು ಉಚ್ಚರಿಸಲು ಹ್ರಸ್ವಸ್ವರದ ಎರಡರಷ್ಟು ಸಮಯ ಬೇಕಾಗುತ್ತದೆ. ಆದ್ದರಿಂದ ಇದು ಧೀರ್ಘಸ್ವರವಾಗಿದೆ]
* ಸಂಧ್ಯಕ್ಷರಗಳು:-  ಐ  ಔ (ಒಟ್ಟು 2)
[ಸೂಚನೆ:- ಐ ಮತ್ತು ಔ ಅಕ್ಷರಗಳು ಧೀರ್ಘಸ್ವರಗಳೂ ಸಂಧ್ಯಕ್ಷರಗಳೂ ಆಗಿವೆ ಎಂಬುದನ್ನು ಮರೆಯದಿರಿ]
ಯೋಗವಾಹಕಗಳು:(ಒಟ್ಟು-2) - ಸ್ವತಂತ್ರವಾದ ಉಚ್ಚಾರಣೆಯನ್ನು ಹೊಂದಿಲ್ಲದ ಹಾಗೂ ಸ್ವರ ಅಥವಾ ವ್ಯಂಜನಗಳ ಸಹಾಯದಿಂದ ಮಾತ್ರ ಉಚ್ಛರಿಸಲ್ಪಡುವ ಅಕ್ಷರಗಳನ್ನು 'ಯೋಗವಾಹಕಗಳು' ಎಂದು ಕರೆಯಲಾಗುತ್ತದೆ.
ಯೋಗವಾಹ (ಂ, ಃ) ಗಳನ್ನು ಪ್ರತ್ಯೇಕವಾಗಿ (ಸ್ವತಃ) ಉಚ್ಚಾರ ಮಾಡಲಾಗುವುದಿಲ್ಲ. ಇನ್ನೊಂದು ಅಕ್ಷರದ ಸಂಬಂಧವನ್ನು ಇವು ಹೊಂದಿದಾಗಲೇ ಉಚ್ಚಾರ ಮಾಡಲು ಬರುತ್ತವೆ. ಯೋಗ ಎಂದರೆ ಸಂಬಂಧವನ್ನು, ವಾಹ ಎಂದರೆ ಹೊಂದಿದ, ಎಂದು ಅರ್ಥ. ಆದ್ದರಿಂದ ಒಂದು ಅಕ್ಷರದ ಸಂಬಂಧವನ್ನು ಹೊಂದಿದ ಮೇಲೆಯೇ ಉಚ್ಚಾರ ಮಾಡಲು ಬರುವ ಇವಕ್ಕೆ ಯೋಗವಾಹಗಳೆಂಬ ಹೆಸರು ಬಂದಿದೆ. ಮುಖ್ಯವಾಗಿ ಇವು ಸ್ವರದ ಸಂಬಂಧ ಪಡೆದ ಮೇಲೆ ಎಂದರೆ ಸ್ವರಾಕ್ಷರಗಳ ಮುಂದೆ ಬಂದಾಗ ಉಚ್ಚಾರವಾಗುತ್ತವೆ. ಅಂ, ಇಂ, ಎಂ, ಒಂ, ಓಂ, ಅಃ, ಇಃ, ಉಃ,__ ಹೀಗೆ ಇವನ್ನು ಸ್ವರದ ಸಂಬಂಧದಿಂದಲೇ ಉಚ್ಚರಿಸಬಹುದಲ್ಲದೆ, ಅದಿಲ್ಲದೆಯೇ ಂ ಃ ಹೀಗೆ ಯಾವ ಅಕ್ಷರ ಸಂಬಂಧವಿಲ್ಲದೆ ಬರೆದರೆ, ಉಚ್ಚಾರಮಾಡಲು ಬರುವುದೇ ಇಲ್ಲ.


    ಅಂ ಮತ್ತು ಅಃ  ಇವುಗಳನ್ನು ಕ್ರಮವಾಗಿ 'ಅನುಸ್ವರ' ಮತ್ತು 'ವಿಸರ್ಗ' ಎಂದು ಕರೆಯಲಾಗುತ್ತದೆ.
1) ಅನುಸ್ವಾರ:- (ಅಂ) - ಇಲ್ಲಿ 'ಅ' ಅಕ್ಷರದ ಜೊತೆಯಲ್ಲಿರುವ '0' ಮಾತ್ರ ಅನುಸ್ವರವಾಗಿದೆ.
2) ವಿಸರ್ಗ:- (ಅಃ) - ಇಲ್ಲಿ 'ಅ' ಅಕ್ಷರದ ಜೊತೆಯಲ್ಲಿರುವ ಎರಡು ಸೊನ್ನೆಗಳ ಸಂಕೇತ ಮಾತ್ರ ವಿಸರ್ಗವಾಗಿದೆ.
[ಯೋಗ ಎಂಬುದು ಯುಜ್ ಅಂದರೆ ಕೂಡು ಎಂದೂ, ವಾಹ ಇದು ವಹ್ ಎಂಬ ಧಾತುವಿನಿಂದ ಹುಟ್ಟಿ ಕೂಡಿಹೋಗು ಎಂಬ ಅರ್ಥವನ್ನೂ ಕೊಡುತ್ತವೆ.  ಆದ್ದರಿಂದ ಯೋಗವಾಹವೆಂದರೆ, ಯಾವುದಾದರೊಂದು ಅಕ್ಷರ ಸಂಬಂಧವಿಲ್ಲದೆ ಉಚ್ಚರಿಸಲಾಗದ ಅಕ್ಷರವೆಂದು ತಿಳಿಯಬೇಕು.]
ವ್ಯಂಜನಗಳು:- (ಒಟ್ಟು-34)  - ಸ್ವರಗಳ ಸಹಾಯದಿಂದ ಮಾತ್ರ ಸ್ಪಷ್ಟವಾಗಿ ಉಚ್ಚರಿಸಲು ಸಾಧ್ಯವಾಗುವ 34 ಅಕ್ಷರಗಳ ಗುಂಪಿಗೆ 'ವ್ಯಂಜನಗಳು' ಎಂದು ಕರೆಯಲಾಗುತ್ತದೆ.
         ಇವುಗಳನ್ನು 'ವರ್ಗೀಯವ್ಯಂಜನಗಳು' ಮತ್ತು 'ಅವರ್ಗೀಯ ವ್ಯಂಜನಗಳು' ಎಂದು ಎರಡು ಗುಂಪುಗಳಾಗಿ ವಿಭಾಗಿಸಲಾಗಿದೆ.
   1)  ವರ್ಗೀಯವ್ಯಂಜನಗಳು-(25):- ವ್ಯವಸ್ಥಿತವಾಗಿ ಜೋಡಿಸಿ, 5 ವರ್ಗಗಳಾಗಿ ವರ್ಗೀಕರಿಸಲಾಗಿರುವ 'ಕ' ಇಂದ 'ಮ' ವರೆಗಿನ 25 ಅಕ್ಷರಗಳನ್ನು 'ವರ್ಗೀಯ ವ್ಯಂಜನಗಳು' ಎಂದು ಕರೆಯಲಾಗುತ್ತದೆ. ಅವುಗಳೆಂದರೆ..
                           ಕ್ ಖ್ ಗ್ ಘ್ ಙ್
                           ಚ್ ಛ್ ಜ್ ಝ್ ಞ್
                           ಟ್ ಠ್ ಡ್ ಢ್ ಣ
                           ತ್ ಥ್ ದ್ ಧ್ ನ್
                           ಪ್ ಫ್ ಬ್ ಭ್ ಮ್                           
        ಈ ಮೇಲಿನ ಅಕ್ಷರಗಳನ್ನು ನೋಡಿದಿರಲ್ಲ! ಇವುಗಳನ್ನು ಕ-ವರ್ಗ, ಚ-ವರ್ಗ, ಟ-ವರ್ಗ, ತ-ವರ್ಗ  ಮತ್ತು ಪ-ವರ್ಗ ಎಂದು ಐದು ವರ್ಗಗಳಾಗಿ ವಿಂಗಡಿಸಲಾಗಿದೆ. ಕ ಇಂದ ಮ ವರೆಗಿನ ಅಕ್ಷರಗಳನ್ನು ಮತ್ತೆ ಮೂರು ಗುಂಪುಗಳಾಗಿ ವಿಂಗಡಿಸಬಹುದು. ಅವು ಈ ಕೆಳಗಿನಂತಿವೆ..
•ಅಲ್ಪಪ್ರಾಣಾಕ್ಷರಗಳು  (10) :- ಕಡಿಮೆ ಉಸಿರಿನ ಸಹಾಯದಿಂದ ಉಚ್ಛರಿಸಲ್ಪಡುವ ವರ್ಗೀಯ ವ್ಯಂಜನಗಳೇ 'ಅಲ್ಪಪ್ರಾಣಾಕ್ಷರಗಳು'.  
       ಅವುಗಳೆಂದರೆ :    ಕ್, ಗ್, ಚ್, ಜ್, ಟ್, ಡ್, ತ್, ದ್, ಪ್, ಬ್
•ಮಹಾಪ್ರಾಣಾಕ್ಷರಗಳು  (10) :- ಹೆಚ್ಚು ಉಸಿರಿನ ಸಹಾಯದಿಂದ ಉಚ್ಛರಿಸಲ್ಪಡುವ ವರ್ಗೀಯ ವ್ಯಂಜನಗಳೇ 'ಮಹಾಪ್ರಾಣಾಕ್ಷರಗಳು'.
       ಅವುಗಳೆಂದರೆ:    ಖ್, ಘ್, ಛ್, ಝ್, ಠ್, ಢ್, ಥ್, ಧ್, ಫ್, ಭ್
•ಅನುನಾಸಿಕಾಕ್ಷರಗಳು  (5) :- ಮೂಗಿನ ಸಹಾಯದಿಂದ ಉಚ್ಛರಿಸಲ್ಪಡುವ ವರ್ಗೀಯ ವ್ಯಂಜನಗಳೇ 'ಅನುನಾಸಿಕಾಕ್ಷರಗಳು'.
       ಅವುಗಳೆಂದರೆ:    ಙ್, ಞ್, ಣ್, ನ್, ಮ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

☼ ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು ☼

☼ ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು ☼ ☼ ಆಂದ್ರಪ್ರದೇಶ 1.ವಿಶಾಖಪಟ್ಟಣ     --  ಭಾಗ್ಯನಗರ,(city of destiny) 2.ವಿಜಯವಾಡ      --  ಗೆಲುವಿನ ಸ್ಥಾನ (place of victory)  3.ಗುಂಟುರು          --  ಮೆಣಸಿನಕಾಯಿಗಳ ನಗರ, ಮಸಾಲೆ ನಗರ ☼ ಉತ್ತರಪ್ರದೇಶ 1.ಆಗ್ರಾ             --  ತಾಜನಗರಿ 2.ಕಾನ್ಪುರ         --  ವಿಶ್ವದ ಚರ್ಮದ ನಗರ, ಉತ್ತರ ಭಾರತದ ಮಾಂಚೆಸ್ಟರ್ 3.ಲಕ್ನೋ          --  ನವಾಬರ ನಗರ (city of nawab's) 4.ಪ್ರಯಾಗ        --  ದೇವರ ಮನೆ 5.ವಾರಾಣಾಸಿ  --  ಭಾರತದ ಧಾರ್ಮಿಕ & ಆಧ್ಯಾತ್ಮಿಕ ನಗರ, ದೀಪಗಳ ನಗರ, ಭೂಮಿಯ ಮೇಲಿರುವಜೀವಂತ    ಹಳೆಯ ನಗರ, ಪವಿತ್ರ ನಗರ ☼ ಗುಜರಾಥ 1. ಅಹಮದಾಬಾದ   --  ಭಾರತದ ಬೋಸ್ಟಾನ್, ಭಾರತದ ಮಾಂಚೆಸ್ಟರ್, 2.ಸೂರತ್          ...

ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳು      ಕನ್ನಡ ವರ್ಣಮಾಲೆಯ ಬಗ್ಗೆ ತಿಳಿದುಕೊಂಡ ನಂತರ ಕಲಿಯಬೇಕಾದ ಲಿಪಿ ರಚನೆಯ ಪ್ರಮುಖ ಭಾಗವೆಂದರೆ ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳದ್ದು. ಇವುಗಳ ಬಗ್ಗೆ ವಿವರವಾಗಿ ತಿಳಿಯೋಣ.        ನೀವು  ಕಾಗುಣಿತ ಎಂಬ ಪದವನ್ನು ಕೇಳಿದ್ದೀರಿ. ವರ್ಣಮಾಲೆಯಲ್ಲಿ ಕ್ ಇಂದ ಳ್ ವರೆಗಿನ 34 ಅಕ್ಷರಗಳಿಗೆ ಬೇರೆಬೇರೆ ಸ್ವರಗಳನ್ನು ಸೇರಿಸಿ ಬೇರೆಬೇರೆ ಅಕ್ಷರಗಳನ್ನು ಪಡೆಯಬಹುದು. ಈ ಪ್ರಕ್ರಿಯೆ ಕ್ ಅಕ್ಷರದಿಂದ ಆರಂಭವಾಗುವುದರಿಂದ ಇವುಗಳಿಗೆ ಕಾಗುಣಿತ ಎಂಬ ಹೆಸರು ಬಂದಿದೆ. ಇದನ್ನು ಅನೇಕ ಕಡೆ 'ಬಳ್ಳಿ' ಎಂದೂ ಕರೆಯುತ್ತಾರೆ. ಇದು ಸೂಕ್ತವೂ ಹೌದು. ಏಕೆಂದರೆ ಕ್ ಇಂದ ಳ್ ವರೆಗಿನ 34 ಅಕ್ಷರಗಳಿಗೆ ವಿವಿಧ ಸ್ವರಗಳನ್ನು ಸೇರಿಸುತ್ತಾ ಹೋದಂತೆ ಅಕ್ಷರಗಳ ಸಂಖ್ಯೆ ಬಳ್ಳಿಯಂತೆ ಬೆಳೆಯುತ್ತಾ ಹೋಗುತ್ತದೆ. ಇವನ್ನೇ ಗುಣಿತಾಕ್ಷರವೆಂದು ಹೇಳಲಾಗುತ್ತದೆ.            ಗುಣಿತಾಕ್ಷರಗಳು "ವ್ಯಂಜನಕ್ಕೆ ಸ್ವರ ಸೇರಿದಾಗ ಗುಣಿತಾಕ್ಷರವಾಗುತ್ತದೆ."     [ವ್ಯಂಜನ  +   ಸ್ವರ   =   ಗುಣಿತಾಕ್ಷರ] ಉದಾಹರಣೆಗೆ:-  ಕ್ ವ್ಯಂಜನಕ್ಕೆ ಬೇರೆ ಬೇರೆ ಸ್ವರಗಳನ್ನು ಸೇರಿಸೋಣ.     ...