ವಿಷಯಕ್ಕೆ ಹೋಗಿ

ನೀರು


ನೀರು
ಮಾರ್ಚ 22 ನ್ನು ವಿಶ್ವಜಲ ದಿನ ಎಂದು ಆಚರಿಲಾಗುತ್ತದೆ. ನೀರಿನ ಬಗ್ಗೆ ತಿಳಿದುಕೊಳ್ಳುವುದು ಅವಶ್ಯ
ನೀರಿನ ಪ್ರಾಮುಖ್ಯತೆ-
 ಭೂಮಿಯ ಮೇಲಿರುವ ಮೂಲಭೂತ ವಸ್ತುಗಳಲ್ಲಿ ನೀರು ಒಂದು. ನೀರನ್ನು ಹೈಡ್ರೋಜನ್ ಮೋನಾಕ್ಸೆಡ್ ಎಂದು ಕರೆಯುವರು. ಜೀವಪೋಷಣೆಯಲ್ಲಿ ನೀರು ಅವಶ್ಯ. ನಮ್ಮ ದೇಹದ 2/3 ಭಾಗ ಮತ್ತು ರಕ್ತದ 9/10 ಭಾಗ ನೀರಿನಿಂದ ಕೂಡಿದೆ. ಭೂಮಿಯು ಸುಮಾರು ¾ ಭಾಗ ನೀರಿನಿಂದ ಆವೃತ್ತವಾಗಿದೆ.
ನೀರಿನ ಲಕ್ಷಣಗಳು-
 ಶುದ್ದ ನೀರು ಬಣ್ಣ ಇಲ್ಲದ ಪಾರದರ್ಶಕ ದ್ರವ. ವಾಸನೆ ಹಾಗೂ ರುಚಿ ಇಲ್ಲದ ದ್ರವ, ನೀರು ಒಂದು ಸಂಯುಕ್ತವಾಗಿದ್ದು, ಇದು ಹೈಡ್ರೋಜನ್ ಮತ್ತು ಆಕ್ಸಿಜನ್ ಧಾತುಗಳಿಂದ 2/1 ಪ್ರಮಾಣದಲ್ಲಿ ಕೂಡಿ ನೀರಾಗಿದೆ. ನೀರಿನ ಅಣುಸೂತ್ರ H20. ಶುದ್ದ ನೀರು ಒಂದು ಅನುಷ್ಟವಾಹಕ ಮತ್ತು ವಿದ್ಯುತವಾಹಕ
 ನೀರು ಯಾವ ತಾಪಮಾನದಲ್ಲಿ ಕುದಿಯುತ್ತದಯೋ ಅದನ್ನು ನೀರಿನ ಕುದಿಯುವ ಬಿಂದು ಎನ್ನುವರು. ನೀರಿನ ಕುದಿಯುವ ಬಿಂದು 100 ಡಿಗ್ರಿ ಸೆಲ್ಸಿಯಸ್. 0 ಡಿಗ್ರಿ ಸೆಲ್ಸಿಯಸ್ ತಾಪದಲ್ಲಿ ನೀರು ಘನಿಭವಿಸುತ್ತದೆ. 4 ಡಿಗ್ರಿಸೆಲ್ಸಿಯ ಇದು ನೀರಿನ ಸಾಂದ್ರತೆ ಇದೆ.
 ನೀರು ಒಂದು ದ್ರಾವಕವಾಗಿದ್ದು, ಎರಡು  ಅಥವಾ ಹೆಚ್ಚು ವಸ್ತುಗಳ ಸಮಜ್ಯಾತ ಮಿಶ್ರಣವನ್ನು ದ್ರಾವಣ ಎನ್ನುವರು ನೀರನ್ನು ಸಾರ್ವತ್ರಿಕ ದ್ರಾವಕ ಎನ್ನುವರು. ನಿಸರ್ಗದಲ್ಲಿ ಸಿಗುವ ಅತ್ಯಂತ ಶುದ್ದವಾಗಿ ಕಂಡುಬರುವುದು ಮಳೆ ನೀರು 0.005% ರಷ್ಟು ಲವಣಗಳನ್ನು ತನ್ನಲ್ಲಿ ಕರಗಿಸಿಕೊಂಡಿರುತ್ತದೆ. ಸಮುದ್ರದ ನೀರು 3.5% ಲವಣಗಳನ್ನೊಳಗೊಂಡಿದೆ. ಲವಣಯುಕ್ತ ನೀರನ್ನು ಅತಿಸಾರ ಮತ್ತು ನಿರ್ಜಲಿಕರಣದಿಂದ ಬಳಲುತ್ತಿರುವ ವ್ಯಕ್ತಿಗೆ ನೀಡಲಾಗುವುದು.
ಜಲಚಕ್ರ-
ಭೂಮಿಯ ಮೇಲಿನ ನೀರು ಸೂರ್ಯನ ಶಾಖದಿಂದ ಕಾದು ಆವಿಯಾಗಿ ವಾತವರಣವನ್ನು ಸೇರುತ್ತದೆ. ಆವಿಯು ಮೋಡವಾಗಿ ಪುನಃ ಮಳೆ ಮತ್ತು ಹಿಮದ ರೂಪದಲ್ಲಿ ಭೂಮಿಯನ್ನು ಸೇರುತ್ತದೆ. ಇದನ್ನು ಜಲಚಕ್ರ ಎನ್ನುವರು. ಜಲಚಕ್ರವು ನಿರಂತರ ಪ್ರಕ್ರಿಯೆಯಾಗಿದ್ದು ಆವೀಕರಣ, ಶಾಂದ್ರೀಕರಣ ಮತ್ತು ಅವಕಾತ ಎಂಬ ಮೂರು ಹಂತಗಳನ್ನು ಒಳಗೊಂಡಿದೆ.
 ಕೆರೆ, ನದಿ, ಸಾಗರಗಳಂತಹ ನೀರಿನ ಆಕರಗಳಲ್ಲಿ ನೀರು ಸೂರ್ಯನ ಶಾಖದಿಂದ ಕಾದು ಆವಿಯಾಗಿ ಗಾಳಿಯನ್ನು ಸೇರುತ್ತದೆ. ಇದನ್ನು ಆವೀಕರಣ ಎನ್ನುವರು. ಆವೀಕರಣದ ಮೂಲಕ ಸೇರಿದ ನೀರಾವಿ ಗಾಳಿಯಲ್ಲಿ ಮೇಲೆ ಸಾಗಿ ತಣ್ಣಗಾಗಿ ಮೋಡಗಳಲ್ಲಿ ನೀರಿನ ಹನಿಗಳಾಗಿ ಬದಲಾಗುತ್ತದೆ, ಇದನ್ನು ಸಾಂದ್ರೀಕರಣ ಎನ್ನುವರು. ಮೋಡಗಳ ಸೂತ್ತಲಿನ ಗಾಳಿಯು ತಣ್ಣಗಾದಾಗ ದೊಡ್ಡದಾಗಿರುವ ಭಾರವಾದ ಹನಿಯಾಗಿ ಮಳೆ ಬಿಳುತ್ತದೆ. ಮೊಡಗಳ ಸೂತ್ತಲಿನ ಗಾಳಿಯು ಇನ್ನೂ ತಂಪಾದಾಗ ಮೋಡದಿಂದ ಹಿಮ ಬೀಳುತ್ತದೆ. ಹೀಗೆ ಮೋಡಗಳಿಂದ ಮಳೆ ಅಥವಾ ಹಿಮ ಬೀಳುವ ಪ್ರಕ್ರಿಯೆಯನ್ನು ಅವಪಾತ ಎನ್ನುವರು.
 ಭೂಮಿಯು ಮೇಲೆ ಲಬ್ಯವಿರುವ ಶೇಕಡಾ 97 ರಷ್ಟು ನೀರು ಸಮುದ್ರ ಮತ್ತು ಸಾಗರಗಳಲ್ಲಿದೆ. ಇದು ಉಪ್ಪು ನೀರು ಇದ್ದು ಕುಡಿಯು ಕೃಷಿ ಅಥವಾ ಕೈಗಾರಿಕೆಗಳಿಗೆ ಬಳಸಲು ಯೋಗ್ಯವಾದುದಲ್ಲ. ಕೇವಲ 3% ಮಾತ್ರ ಸಿಹಿ ನೀರು ಇದರಲ್ಲಿ 2% ರಷ್ಟು ಧ್ರುವ ಪ್ರದೇಶಗಳಲ್ಲಿ ಮಂಜುಗಡ್ಡೆಯ ರೂಪದಲ್ಲಿ ಮತ್ತು 1% ರಷ್ಟು ನದಿ ಸರೋವರಗಳಂತಹ ನೀರಿನ ಆಕರಗಳಲ್ಲಿದೆ. ನಾವು ನೀರನ್ನು ಮಿತವಾಗಿ ವಿವೇಚನೆಯಿಂದ ಬಳಸದೇ ಇದ್ದರೆ ಕ್ಷಾಮ ಉಂಟಾಗಿ ಬರಗಾಲ ಸಂಭವಿಸುತ್ತದೆ.
ನೀರಿನ ಅಭಾವಕ್ಕೆ ಕಾರಣಗಳು
-ಜನಸಂಖ್ಯಾ ಹೆಚ್ಚಳದಿಂದ ನೀರಿನ ನಿರಂತರ ಬಳಕೆ ಹೆಚ್ಚಾದ ಕೈಗಾರಿಕರಣದಿಂದ
-ಮಳೆಯ ಅಸಮಾನ ಹಂಚಿಕೆ ಇದ್ದು ಮಳೆಯು ಎಲ್ಲಾ ಕಡೆಗಳಲ್ಲಿ ಒಂದೇ ರೀತಿಯಾಗಿ ಬೀಳುವುದಿಲ್ಲ.
-ಅಂತರ್ಜಲ ಮಟ್ಟದ ಕುಸಿತ. ಅಂತರ್ಜಲವನ್ನು ಹೆಚ್ಚು ಬಳಕೆ ಮಾಡುತ್ತಿರುವುದರಿಂದ  ಅಂತರ್ಜಲ ಮಟ್ಟ ಕುಸಿದು ಕೆಲವು ಕಡೆಗಳಲ್ಲಿ ಬತ್ತಿ ಹೋಗಿದೆ.
-ಜಲಮಾಲಿನ್ಯ: ನೀರು ಸಾರ್ವತ್ರಿಕ ದ್ರಾವಕವಾಗಿರುವುದರಿಂದ ಗೃಹ ಮತ್ತು ಕೃಷಿ ಕೈಗಾರಿಕೆಗಳ ತಾಜ್ಯವಸ್ತುಗಳು ನೀರಿನೊಂದಿಗೆ ಸೇರಿಕೊಂಡು ನೀರು ಕಲುಷಿತಗೊಂಡು ಕಾಯಿಲೆಗಳಿಗೆ ಎಡೆ ಮಾಡಿಕೊಟ್ಟಿದೆ. ಅಲ್ಲದೇ ಜಲಚರ, ಜಲಸಸ್ಯಗಳು ನಾಶವಾಗುತ್ತಿವೆ.
-ನೀರಿನ ವಿವೇಚನಾರಹಿತ ಬಳಕೆ: ನೀರನ್ನು ಸಮರ್ಷಕವಾಗಿ ಬಳಸದೇ ಅಗತ್ಯಕ್ಕಿಂತಾ ಹೆಚ್ಚಾಗಿ ಬಳಸುತ್ತಿರುವುದರಿಂದ ನೀರಿನ ಅಭಾವ ಸೃಷ್ಠಿಯಾಗಿದೆ.
ನೀರಿನ ನಿರ್ವಹಣೆ-
 ನೀರು ಜೀವ ಸಂಕುಲದ ಉಗಮ, ಅಸ್ತಿತ್ವ ಮತ್ತು ಬೆಳವಣಿಗೆಗೆ ಕಾರಣವಾಗಿದ್ದು ಸಮರ್ಪಕವಾಗಿ ಬಳಸುವುದರಿಂದ ನೀರನ್ನು ಸಂರಕ್ಷಿಸಬಹುದು
ನೀರಿಗೆ ಕ್ಲೋರಿನ ನಂತರ ರೋಗನಿವಾರಕ ರಾಸಾಯನಿಕಗಳನ್ನು ಬೆರೆಸಿ ಶುದ್ದೀಕರಿ ಕುಡಿಯವ ನೀರನ್ನು ಪೂರೈಸುವುದು
ತಾಜ್ಯವಸ್ತುಗಳನ್ನು ನೀರಿನ ಆಕರಗಳಿಗೆ ಹಾಕುವುದರಿಂದ ಆಗುವ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು.
ಕೈಗಾರಿಕಾ ತಾಜ್ಯಗಳನ್ನು ನೀರಿನ ಆಕರಗಳಿಗೆ ವಿಸರ್ಜಿಸುವ ಮೊದಲು ವೈಜ್ಞಾನಿಕ ಸಂಸ್ಕರಣೆಗೆ ಒಳಪಡಿಸುವುದು.
ಕಲುಷಿತ ನೀರನ್ನು ಶುದ್ದೀಕರಿಸಿ ಪುನಃ ಬಳಕೆ ಮಾಡುವುದು
ಜಲಾನಯನ ಪ್ರದೇಶಳ ಹೂಳೆತ್ತಿ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸುವುದು.
ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡುವುದು.
ಚೆಕ್ ಡ್ಯಾಂಗಳನ್ನು ನಿರ್ಮಿಸಿ ನೀರನ್ನು ಸಂಗ್ರಹಿಸುವುದು.
ಅರಣ್ಯ ನಾಶವನ್ನು ಕಡಿಮೆ ಮಾಡಿ ನದಿಗಳ ಅಂತರ ಜೋಡಣೆಯನ್ನು ಮಾಡುವುದು.
ಕೃಷಿಯಲ್ಲಿ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ದತಿಯನ್ನು ಅಳವಡಿಸಿಕೊಳ್ಳುವುದು.
ಮಳೆ ನೀರು ಕೊಯ್ಲಿನ ಮೂಖಾಂತರ ನೀರನ್ನು ಸಂಗ್ರಹಿಸಿ ಬಳಕೆ ಮಾಡುವುದರೊಂದಿಗೆ ಭೂಮಿಯಲ್ಲಿ ಇಂಗುವಂತೆ ಮಾಡಿ ಮರುಪೂರಣ ಮಾಡುವುದು.
ಟಿಪ್ಪಣಿ-
 ರಾಜಸ್ಥಾನದ ನಿವಾಸಿ ರಾಜೇಂದ್ರಸಿಂಗ್ ಭಾರತದ ಖ್ಯಾತ ಜಲ ಸಂರಕ್ಷಕರಾಗಿದ್ದು ಮಳೆ ನೀರು ಕೊಯ್ಲು ಮತ್ತು ಜಲ ನಿರ್ವಹಣೆಯಾಗಿ ಇವರಿಗೆ ಮ್ಯಾಗ್ಸೆಸ್ ಪ್ರಶಸ್ತಿ ದೊರೆತಿದೆ. ಇವರು ನಿರ್ಮಿಸಿದ ಜೊಹಾಡಗಳು ಅಂದರೆ ಮಳೆ ನೀರು ಸಂಗ್ರಹಣಾ ತೊಟ್ಟಿಗಳು ಮಳೆ ನೀರನ್ನು ಸಂಗ್ರಹಿಸಿಕೊಂಡು ವರ್ಷದುದ್ದಕ್ಕೂ ರಾಜಸ್ಥಾನದ ಜನತೆಗೆ ನೀರನ್ನು ಒದಗಿಸುತ್ತದೆ.
courtesy (jnanalok.blogspot.com)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ವರ್ಣಮಾಲೆ

ವರ್ಣಮಾಲೆ ಮತ್ತು ಧ್ವನ್ಯಂಗಗಳು ಕನ್ನಡ ವರ್ಣಮಾಲೆ         ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ. ಅವುಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು. •ಸ್ವರಗಳು ಮತ್ತು ಸಂಧ್ಯಕ್ಷರಗಳು (13) •ಯೋಗವಾಹಕಗಳು (2) •ವ್ಯಂಜನಗಳು (34) ಸ್ವರಗಳು: (ಒಟ್ಟು-13) "ಸ್ವತಂತ್ರವಾದ, ಸ್ಪಷ್ಟವಾದ ಉಚ್ಚಾರಣೆಯನ್ನು ಹೊಂದಿರುವ ಅಕ್ಷರಗಳನ್ನು 'ಸ್ವರಗಳು' ಎಂದು ಕರೆಯಲಾಗುತ್ತದೆ." ಕನ್ನಡ ವರ್ಣಮಾಲೆಯಲ್ಲಿ ಒಟ್ಟು 13 ಸ್ವರಗಳಿದ್ದು ಅವುಗಳಲ್ಲಿ ಎರಡು ಅಕ್ಷರಗಳನ್ನು ಸಂಧ್ಯಕ್ಷರಗಳೆಂದೂ ಕರೆಯಲಾಗುತ್ತದೆ. ಅವುಗಳೆಂದರೆ:- ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ       ಸ್ವರಗಳನ್ನು 'ಹ್ರಸ್ವಸ್ವರ' 'ಧೀರ್ಘಸ್ವರ' ಮತ್ತು 'ಸಂಧ್ಯಕ್ಷರ' ಎಂದು ಮೂರು ವಿಧಗಳಾಗಿ ವಿಂಗಡಿಸಬಹುದು. * ಹ್ರಸ್ವಸ್ವರಗಳು:-  ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ಹ್ರಸ್ವಸ್ವರಗಳು ಎನ್ನುವರು.  -ಅವುಗಳೆಂದರೆ- ಅ ಇ ಉ ಋ ಎ ಒ (ಒಟ್ಟು 6) * ಧೀರ್ಘಸ್ವರಗಳು:- ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ಧೀರ್ಘಸ್ವರಗಳು ಎನ್ನುವರು. ಅವುಗಳೆಂದರೆ- ಆ ಈ ಊ ಏ ಐ ಓ ಔ (ಒಟ್ಟು 7) [ಟಿಪ್ಪಣಿ:- ಯಾವುದೇ ಒಂದು ಅಕ್ಷರವನ್ನು ಉಚ್ಚರಿಸಲು ತೆಗೆದುಕೊಳ್ಳುವ ಸಮಯವನ್ನು ಮಾತ್ರೆಗಳಿಂದ ಅಳೆಯಲಾಗುತ್ತದೆ. 'ಅ' ಎಂಬ ಅಕ್ಷರವನ್ನು ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿ...

☼ ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು ☼

☼ ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು ☼ ☼ ಆಂದ್ರಪ್ರದೇಶ 1.ವಿಶಾಖಪಟ್ಟಣ     --  ಭಾಗ್ಯನಗರ,(city of destiny) 2.ವಿಜಯವಾಡ      --  ಗೆಲುವಿನ ಸ್ಥಾನ (place of victory)  3.ಗುಂಟುರು          --  ಮೆಣಸಿನಕಾಯಿಗಳ ನಗರ, ಮಸಾಲೆ ನಗರ ☼ ಉತ್ತರಪ್ರದೇಶ 1.ಆಗ್ರಾ             --  ತಾಜನಗರಿ 2.ಕಾನ್ಪುರ         --  ವಿಶ್ವದ ಚರ್ಮದ ನಗರ, ಉತ್ತರ ಭಾರತದ ಮಾಂಚೆಸ್ಟರ್ 3.ಲಕ್ನೋ          --  ನವಾಬರ ನಗರ (city of nawab's) 4.ಪ್ರಯಾಗ        --  ದೇವರ ಮನೆ 5.ವಾರಾಣಾಸಿ  --  ಭಾರತದ ಧಾರ್ಮಿಕ & ಆಧ್ಯಾತ್ಮಿಕ ನಗರ, ದೀಪಗಳ ನಗರ, ಭೂಮಿಯ ಮೇಲಿರುವಜೀವಂತ    ಹಳೆಯ ನಗರ, ಪವಿತ್ರ ನಗರ ☼ ಗುಜರಾಥ 1. ಅಹಮದಾಬಾದ   --  ಭಾರತದ ಬೋಸ್ಟಾನ್, ಭಾರತದ ಮಾಂಚೆಸ್ಟರ್, 2.ಸೂರತ್          ...

ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳು      ಕನ್ನಡ ವರ್ಣಮಾಲೆಯ ಬಗ್ಗೆ ತಿಳಿದುಕೊಂಡ ನಂತರ ಕಲಿಯಬೇಕಾದ ಲಿಪಿ ರಚನೆಯ ಪ್ರಮುಖ ಭಾಗವೆಂದರೆ ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳದ್ದು. ಇವುಗಳ ಬಗ್ಗೆ ವಿವರವಾಗಿ ತಿಳಿಯೋಣ.        ನೀವು  ಕಾಗುಣಿತ ಎಂಬ ಪದವನ್ನು ಕೇಳಿದ್ದೀರಿ. ವರ್ಣಮಾಲೆಯಲ್ಲಿ ಕ್ ಇಂದ ಳ್ ವರೆಗಿನ 34 ಅಕ್ಷರಗಳಿಗೆ ಬೇರೆಬೇರೆ ಸ್ವರಗಳನ್ನು ಸೇರಿಸಿ ಬೇರೆಬೇರೆ ಅಕ್ಷರಗಳನ್ನು ಪಡೆಯಬಹುದು. ಈ ಪ್ರಕ್ರಿಯೆ ಕ್ ಅಕ್ಷರದಿಂದ ಆರಂಭವಾಗುವುದರಿಂದ ಇವುಗಳಿಗೆ ಕಾಗುಣಿತ ಎಂಬ ಹೆಸರು ಬಂದಿದೆ. ಇದನ್ನು ಅನೇಕ ಕಡೆ 'ಬಳ್ಳಿ' ಎಂದೂ ಕರೆಯುತ್ತಾರೆ. ಇದು ಸೂಕ್ತವೂ ಹೌದು. ಏಕೆಂದರೆ ಕ್ ಇಂದ ಳ್ ವರೆಗಿನ 34 ಅಕ್ಷರಗಳಿಗೆ ವಿವಿಧ ಸ್ವರಗಳನ್ನು ಸೇರಿಸುತ್ತಾ ಹೋದಂತೆ ಅಕ್ಷರಗಳ ಸಂಖ್ಯೆ ಬಳ್ಳಿಯಂತೆ ಬೆಳೆಯುತ್ತಾ ಹೋಗುತ್ತದೆ. ಇವನ್ನೇ ಗುಣಿತಾಕ್ಷರವೆಂದು ಹೇಳಲಾಗುತ್ತದೆ.            ಗುಣಿತಾಕ್ಷರಗಳು "ವ್ಯಂಜನಕ್ಕೆ ಸ್ವರ ಸೇರಿದಾಗ ಗುಣಿತಾಕ್ಷರವಾಗುತ್ತದೆ."     [ವ್ಯಂಜನ  +   ಸ್ವರ   =   ಗುಣಿತಾಕ್ಷರ] ಉದಾಹರಣೆಗೆ:-  ಕ್ ವ್ಯಂಜನಕ್ಕೆ ಬೇರೆ ಬೇರೆ ಸ್ವರಗಳನ್ನು ಸೇರಿಸೋಣ.     ...