ತೇಜಸ್
ಸ್ವದೇಶಿ ನಿರ್ಮಿತ ಲಘು ಯುದ್ದ ವಿಮಾನ, ವಾಯುಪಡೆಗೆ ಹಸ್ತಾಂತರ
ಹಿಂದೂಸ್ತಾನ ಏರೋನಾಟಿಕ್ಸ್ ಲಿಮಿಟೆಡ್ (ಹೆಎಎಲ್) ಹಾಗೂ ಡಿಆರ್.ಡಿಓ ಸಹಭಾಗಿತ್ವದಲ್ಲಿ ದೇಶಿಯವಾಗಿ ನಿರ್ಮಿತ ತೇಜಸ್ ಲಘು ವಿಮಾನವನ್ನು ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ ಅವರು ವಾಯಪಡೆಗೆ ಜನೇವರಿ 17 2105 ರಂದು ಹಸ್ತಾಂತರಿಸಿದರು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಏರ್ ಚೀಪ್ ಮಾರ್ಷಲ್ ಅರೂಪ್ ರಹಾ ಅವರು ಹಾಜರಿದ್ದರು. 32 ವರ್ಷಗಳ ಸುದೀರ್ಘ ಅದ್ಯಯನದ ಫಲವಾಗಿ ಈ ಯುದ್ದವಿಮಾನ ರೂಪಗೊಂಡಿದೆ. ಮಿಗ್ ವಿಮಾನಗಳ ಸತತ ವೈಪಲ್ಯದ ನಂತರ ಲಘು ಯುದ್ದ ವಿಮಾನಗಳ ತೀವ್ರ ಕೊರತೆ ಎದುರಿಸುತ್ತಿರುವ ಭಾರತ ಈಗ ತೇಜಸ್ ಲಘು ಯುದ್ದ ವಿಮಾನದಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. 1983 ರಲ್ಲಿ ಈ ಯೋಜನೆಗೆ ಚಾಲನೆ ದೊರೆಕಿತ್ತು. ಜನೇವರಿ 04, 2001 ರಂದು ಇದರ ಮೊದಲ ಪರೀಕ್ಷಾರ್ಥ ಹಾರಾಟ ನಡೆದಿತ್ತು. ಆಕಾಶದಿಂದ ಆಕಾಶ, ಆಕಾಶದಿಂದ ಭೂಮಿ ಮತ್ತು ಭೂಮಿಯಿಂದ ಸಮುದ್ರದೆಡೆಗೆ ಮುನ್ನುಗ್ಗಬಲ್ಲ ರೀತಿಯಲ್ಲಿ ಇದನ್ನು ವಿನ್ಯಾಸಗೊಳಸಿಲಾಗಿದೆ. ರಷ್ಯಾ ನಿರ್ಮಿತ ಮಿಗ್-21 ಪೈಟರ್ ಜೆಟಗೆ ಪರ್ಯಾಯವಾಗಿ ಈ ಲಘು ಯುದ್ದವಿಮಾನ ಬಳಸುವ ಉದ್ದೇಶ ಹೊಂದಲಾಗಿದೆ. ಈ ತೇಜಸ್ ಲಘು ಯುದ್ದವಿಮಾನ 13.2 ಮೀಟರ್ ಉದ್ದ, 4.4 ಮೀಟರ್ ಎತ್ತರ ಹಾಗೂ 12 ಟನ್ ಭಾರ ಹೊಂದಿದ್ದು ಗಂಟೆಗೆ 1350 ಕಿ ಮೀ ಹಾರಾಟ ಸಾಮರ್ಥ್ಯ ಹೊಂದಿದೆ. ಈ ಲಘು ಯುದ್ದವಿಮಾನದಲ್ಲಿ ಕಾರ್ಬನ್ ಪೈಬರಗಳ ಮಿಶ್ರಣವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿ ನಿರ್ಮಾಣ ಮಾಡಲಾಗಿದೆ. ವಿಮಾನ ನಿಯಂತ್ರಣ ವ್ಯವಸ್ಥೆ, ಮುಕ್ತ ಆರ್ಕಿಟೆಕ್ಚರ್ ಕಂಪ್ಯೂಟರ್, ರಾಡಾರ್ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆಯನ್ನು ಈ ವಿಮಾನ ಹೊಂದಿದೆ. ಅತ್ಯಂತ ಉಷ್ಣ ಹಾಗೂ ತಂಪು ಪ್ರದೇಶ ಸೇರಿ ನಾನಾ ವಾತಾವರಣಗಳಲ್ಲಿ ಕಾರ್ಯನಿರ್ವಹಿಸಬಲ್ಲದ್ದಾಗಿದೆ. ಈ ಯೋಜನೆಗಾಗಿ ಮಾಡಿರುವ ಒಟ್ಟು ವೆಚ್ಚ 17,269 ಕೋಟಿ ರೂ. ಈ ಲಘು ಯುದ್ದವಿಮಾನದ ಎರಡನೇ ಹಂತದ ಕಾರ್ಯಾಚರಣೆ 2017-18 ರ ವೇಳೆಗೆ 20 ತೇಜಸ್ ವಿಮಾನಗಳನ್ನು ನಿರ್ಮಿಸುವ ಗುರಿ ಹೊಂದಿದೆ.
ತೇಜಸ್ ಲಘು ಯುದ್ದ ವಿಮಾನದ ವಿಶೇಷ ಸಂಗತಿಗಳು-
1) ಅಮೇರಿಕಾ ನಿರ್ಮಿತ ಇಂಜಿನನಿಂದಾ ತೇಜಸ್ ಚಲಿಸುತ್ತದೆ.
2) ಈ ವಿಮಾನ ಕ್ಷೀಪನಿ, ಲೇಸರ್ ಬಾಂಬಗಳು ಸೇರಿ 3 ಟನ್ ತೂಕದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲದು.
3) ಈ ಲಘು ಯುದ್ದ ವಿಮಾನಕ್ಕೆ 2003 ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ತೇಜಸ್ ಎಂದು ನಾಮಕರಣ ಮಾಡಿದರು.
ತೇಜಸ್ ವಿಮಾನದ ವಿಶೇಷತೆಗಳು.
ವಿಧ-ಲಘು ಯುದ್ದ ವಿಮಾನ
ಯೋಜನೆಗೆ ಚಾಲನೆ ದೊರೆತ ವರ್ಷ-1983
ಮೊದಲ ಪರೀಕ್ಷಾರ್ಥ ಹಾರಾಟ-ಜನೇವರಿ 04 2001
ಉದ್ದ-13.2 ಮೀಟರ್
ಎತ್ತರ-4.4 ಮೀಟರ್
ರೆಕ್ಕೆಯ ಅಗಲ-8.2 ಮೀಟರ್
ಭಾರ-12 ಟನ್
ವೇಗ-1350 ಕಿ ಮೀ ಪ್ರತಿ ಗಂಟೆಗೆ
ಕಾರ್ಯಾಚರಣೆ ವ್ಯಾಪ್ತಿ- 400 ಕಿ ಮೀ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ