ವಿಷಯಕ್ಕೆ ಹೋಗಿ

ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳು




     ಕನ್ನಡ ವರ್ಣಮಾಲೆಯ ಬಗ್ಗೆ ತಿಳಿದುಕೊಂಡ ನಂತರ ಕಲಿಯಬೇಕಾದ ಲಿಪಿ ರಚನೆಯ ಪ್ರಮುಖ ಭಾಗವೆಂದರೆ ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳದ್ದು. ಇವುಗಳ ಬಗ್ಗೆ ವಿವರವಾಗಿ ತಿಳಿಯೋಣ.



       ನೀವು  ಕಾಗುಣಿತ ಎಂಬ ಪದವನ್ನು ಕೇಳಿದ್ದೀರಿ. ವರ್ಣಮಾಲೆಯಲ್ಲಿ ಕ್ ಇಂದ ಳ್ ವರೆಗಿನ 34 ಅಕ್ಷರಗಳಿಗೆ ಬೇರೆಬೇರೆ ಸ್ವರಗಳನ್ನು ಸೇರಿಸಿ ಬೇರೆಬೇರೆ ಅಕ್ಷರಗಳನ್ನು ಪಡೆಯಬಹುದು. ಈ ಪ್ರಕ್ರಿಯೆ ಕ್ ಅಕ್ಷರದಿಂದ ಆರಂಭವಾಗುವುದರಿಂದ ಇವುಗಳಿಗೆ ಕಾಗುಣಿತ ಎಂಬ ಹೆಸರು ಬಂದಿದೆ. ಇದನ್ನು ಅನೇಕ ಕಡೆ 'ಬಳ್ಳಿ' ಎಂದೂ ಕರೆಯುತ್ತಾರೆ. ಇದು ಸೂಕ್ತವೂ ಹೌದು. ಏಕೆಂದರೆ ಕ್ ಇಂದ ಳ್ ವರೆಗಿನ 34 ಅಕ್ಷರಗಳಿಗೆ ವಿವಿಧ ಸ್ವರಗಳನ್ನು ಸೇರಿಸುತ್ತಾ ಹೋದಂತೆ ಅಕ್ಷರಗಳ ಸಂಖ್ಯೆ ಬಳ್ಳಿಯಂತೆ ಬೆಳೆಯುತ್ತಾ ಹೋಗುತ್ತದೆ. ಇವನ್ನೇ ಗುಣಿತಾಕ್ಷರವೆಂದು ಹೇಳಲಾಗುತ್ತದೆ.
          

ಗುಣಿತಾಕ್ಷರಗಳು
"ವ್ಯಂಜನಕ್ಕೆ ಸ್ವರ ಸೇರಿದಾಗ ಗುಣಿತಾಕ್ಷರವಾಗುತ್ತದೆ."
    [ವ್ಯಂಜನ  +   ಸ್ವರ   =   ಗುಣಿತಾಕ್ಷರ]
ಉದಾಹರಣೆಗೆ:-  ಕ್ ವ್ಯಂಜನಕ್ಕೆ ಬೇರೆ ಬೇರೆ ಸ್ವರಗಳನ್ನು ಸೇರಿಸೋಣ.    
 ಕ್       +    ಅ    =      ಕ
                                           ಕ್       +    ಆ    =      ಕಾ 
                                           ಕ್       +    ಇ    =      ಕಿ
                                           ಕ್       +    ಈ    =     ಕೀ
                                           ಕ್       +    ಋ    =     ಕೃ
                                           ಕ್       +    ಎ    =      ಕೆ
                                           ಕ್       +    ಏ    =      ಕೇ
                                           ಕ್       +    ಐ    =      ಕೈ
                                           ಕ್       +    ಒ    =      ಕೊ
                                           ಕ್       +    ಓ    =      ಕೋ
                                           ಕ್       +    ಔ    =      ಕೌ
                                           ಕ್       +   ಅ0   =     ಕಂ
                                           ಕ್      +    ಅಃ    =     ಕಃ
  ಈ ಗುಣಿತಾಕ್ಷರಗಳನ್ನು ಆಧಾರವಾಗಿಟ್ಟುಕೊಂಡು ಬೇರೆ ಅಕ್ಷರಗಳಿಗೆ  ಗುಣಿತಾಕ್ಷರಗಳನ್ನು ಬರೆಯುವುದನ್ನು ಅಭ್ಯಾಸಮಾಡಿ.
  ಒಂದು ಪದವನ್ನು ಉದಾಹರಣೆಯಾಗಿ ತೆಗೆದುಕೊಂಡು ವ್ಯಂಜನ ಮತ್ತು ಸ್ವರಗಳಾಗಿ ವಿಂಗಡಿಸುವ ಬಗ್ಗೆ ತಿಳಿಯೋಣ.
ಮೈಸೂರು ಎಂಬ ಪದವನ್ನು ವ್ಯಂಜನ ಮತ್ತು ಸ್ವರಗಳಾಗಿ ಕೆಳಕಂಡಂತೆ ಬಿಡಿಸಿ ಬರೆಯಬಹುದು.
ಮೈಸೂರು = ಮ್ + ಐ + ಸ್ + ಊ + ರ್ + ಉ
    ಮೈ         ಸೂ           ರು
(ಮ್+ಐ,    ಸ್+ಊ,    ರ್+ಉ)
     ಈ ಮೇಲಿನಂತೆ ಒತ್ತಕ್ಷರವಿಲ್ಲದ ಪದಗಳನ್ನು ಬರೆದುಕೊಂಡು ವ್ಯಂಜನ ಮತ್ತು ಸ್ವರಗಳಾಗಿ ವಿಂಗಡಿಸಿರಿ.
       ನಿಮಗೆ ಗುಣಿತಾಕ್ಷರಗಳ ಪರಿಚಯವಾಯಿತಲ್ಲವೆ? ಇನ್ನು ಮುಂದಿನ ಭಾಗದಲ್ಲಿ ಸಂಯುಕ್ತಾಕ್ಷರಗಳ ಬಗ್ಗೆ ತಿಳಿಯೋಣ.....
ಸಂಯುಕ್ತಾಕ್ಷರಗಳು
     ಮೇಲೆ ನೀವು ಗುಣಿತಾಕ್ಷರಗಳ ಬಗ್ಗೆ ತಿಳಿದುಕೊಂಡಿರಿ. ಅಲ್ಲಿ ಒಂದು ವ್ಯಂಜನಕ್ಕೆ ಒಂದು ಸ್ವರ ಸೇರುವುದು. ಅಂದರೆ ಒಂದು ಗುಣಿತಾಕ್ಷರದಲ್ಲಿ ಒಂದು ವ್ಯಂಜನ ಮತ್ತು ಒಂದು ಸ್ವರ ಮಾತ್ರ ಇರುತ್ತದೆ ಎಂದಾಯಿತು. ಆದರೆ ಎರಡು ಅಥವಾ ಅದಕ್ಕಿಂತ ಹೆಚ್ಚಿನ ವ್ಯಂಜನಗಳು ಒಂದು ಅಕ್ಷರದಲ್ಲಿರಬಹುದೇ ? ಆಲೋಚಿಸಿ.
    ಹೌದು! ಒಂದು ಅಕ್ಷರದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ವ್ಯಂಜನ ಇರುವುದೂ ಉಂಟು. ಈ ಕೆಳಗಿನ ಉದಾಹರಣೆಯನ್ನು ಗಮನಿಸಿ.

ಉದಾ-1: ಅಕ್ಕ ಎಂಬ ಪದದಲ್ಲಿ ಕ್ಕ ಎಂಬ ಅಕ್ಷರವನ್ನು ಗಮನಿಸಿ. ಇದರಲ್ಲಿ ಒತ್ತಕ್ಷರ ಇರುವುದನ್ನು ಕಾಣಬಹುದು. ಇದನ್ನು ಬಿಡಿಸಿದಾಗ  ಕ್ + ಕ್ + ಅ  ಎಂದಾಗುತ್ತದೆ. ಇಲ್ಲಿ ಮೂರು ಅಕ್ಷರಗಳಿವೆ. ಅವುಗಳಲ್ಲಿ ಮೊದಲೆರಡು (ಕ್+ಕ್) ವ್ಯಂಜನಗಳಾಗಿದ್ದು ಕೊನೆಯಲ್ಲಿರುವ ಅಕ್ಷರ (ಅ) ಸ್ವರವಾಗಿದೆ.

ಉದಾ-2: ಸತ್ಯ ಎಂಬ  ಪದವನ್ನು ಗಮನಿಸಿ ಇಲ್ಲಿ ತ್ಯ ಅಕ್ಷರದಲ್ಲಿ ಯ ವ್ಯಂಜನದ ಒತ್ತಕ್ಷರವಿರುವುದನ್ನು ಕಾಣಬಹುದು.
ಇದನ್ನು ಬಿಡಿಸಿದಾಗ  ತ್ + ಯ್ + ಅ  ಎಂದಾಗುತ್ತದೆ. ಇಲ್ಲಿಯೂ ಮೂರು ಅಕ್ಷರಗಳಿವೆ. ಅವುಗಳಲ್ಲಿ ಮೊದಲೆರಡು (ತ್+ಯ್) ವ್ಯಂಜನಗಳಾಗಿದ್ದು ಕೊನೆಯಲ್ಲಿರುವ ಅಕ್ಷರ (ಅ) ಸ್ವರವಾಗಿದೆ.

ಉದಾ-3: ಸ್ತ್ರೀ ಎಂಬ  ಪದವನ್ನು ಗಮನಿಸಿ ಇಲ್ಲಿ ಸ್ ವ್ಯಂಜನಕ್ಕೆ ತ್ ಮತ್ತು ರ್ ವ್ಯಂಜನಗಳ ಒತ್ತಕ್ಷರಗಳಿರುವುದನ್ನು ಕಾಣಬಹುದು
ಇದನ್ನು ಬಿಡಿಸಿದಾಗ  ಸ್ + ತ್ + ರ್ + ಈ  ಎಂದಾಗುತ್ತದೆ. ಇಲ್ಲಿ ನಾಲ್ಕು ಮೂರು ಅಕ್ಷರಗಳಿವೆ. ಅವುಗಳಲ್ಲಿ ಮೊದಲ ಮೂರು (ಸ್+ತ್+ಯ್)  ವ್ಯಂಜನಗಳಾಗಿದ್ದು ಕೊನೆಯಲ್ಲಿರುವ ಅಕ್ಷರ (ಈ) ಸ್ವರವಾಗಿದೆ.
  ಹೀಗೆ ಒತ್ತಕ್ಷರಗಳನ್ನು ಹೋದಿರುವ ಅಕ್ಷರಗಳು ಸಂಯುಕ್ತಾಕ್ಷಗಳೆಂದು ಹೇಳಬಹುದು. ಈಗ ನಿಮಗೆ ಸಂಯುಕ್ತಾಕ್ಷದ ಕಲ್ಪನೆ ಬಂದಿರಬಹುದು. ಹಾಗಾದರೆ ಸಂಯುಕ್ತಾಕ್ಷರ ಎಂದರೇನು?
"ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳನ್ನು ಹೊಂದಿರುವ (ಒತ್ತಕ್ಷರವನ್ನು) ಹೊಂದಿರುವ  ಅಕ್ಷರಗಳೇ ಸಂಯುಕ್ತಾಕ್ಷರಗಳು."
[ವ್ಯಂಜನ+ವ್ಯಂಜನ+ಸ್ವರ=ಸಂಯುಕ್ತಾಕ್ಷರ]
ಸಂಯುಕ್ತಾಕ್ಷರಗಳಲ್ಲಿ ಎರಡು ವಿಧ:
1) ಸಜಾತೀಯ ಸಂಯುಕ್ತಾಕ್ಷರ.
2) ವಿಜಾತೀಯ ಸಂಯುಕ್ತಾಕ್ಷರ.
ಏನಿದು ಸಜಾತೀಯ/ ವಿಜಾತೀಯ? ಮೇಲೆ ನೀಡಲಾಗಿರುವ ಮತ್ತು ಈ ಕೆಳಗಿನ  ಉದಾಹರಣೆಗಳನ್ನು ಗಮನಿಸಿ....
ಉದಾ: ಅಪ್ಪ ಈ  ಪದದಲ್ಲಿ ಪ್ಪ ಎಂಬ ಅಕ್ಷರವನ್ನು ಗಮನಿಸಿ ಇಲ್ಲಿ  ಪ್+ಪ್+ಅ ಎಂಬ ಮೂರು ಅಕ್ಷರಗಳಿವೆ. ಇವುಗಳಲ್ಲಿ ಮೊದಲೆರಡು(ಪ್+ಪ್) ಒಂದೇ ರೀತಿಯ ವ್ಯಂಜನಗಳಾಗಿವೆ. ಆದ್ದರಿಂದ ಪ್ಪ ಎಂಬುದು ಸಜಾತೀಯ ಸಂಯುಕ್ತಾಕ್ಷರವಾಗಿದೆ.
ಉದಾ: ಶ್ರವಣ ಈ  ಪದದಲ್ಲಿ ಶ್ರ ಎಂಬ ಅಕ್ಷರವನ್ನು ಗಮನಿಸಿ ಇಲ್ಲಿ  ಶ್+ರ್+ಅ ಎಂಬ ಮೂರು ಅಕ್ಷರಗಳಿವೆ. ಇವುಗಳಲ್ಲಿ ಮೊದಲೆರಡು (ಶ್+ರ್) ಬೇರೆ ಬೇರೆ ರೀತಿಯ ವ್ಯಂಜನಗಳಾಗಿವೆ. ಆದ್ದರಿಂದ ಶ್ರ ಎಂಬುದು ವಿಜಾತೀಯ ಸಂಯುಕ್ತಾಕ್ಷರವಾಗಿದೆ
ಹೀಗೆ "ಒಂದೇ ರೀತಿಯ ವ್ಯಂಜನಗಳನ್ನು ಹೊಂದಿರುವ ಸಂಯುಕ್ತಾಕ್ಷರಗಳನ್ನು 'ಸಜಾತೀಯ ಸಂಯುಕ್ತಾಕ್ಷರ' ಎಂದು ಹೇಳಲಾಗುತ್ತದೆ."
ಉದಾ: ಕ್ಕ, ನ್ನ, ಮ್ಮ, ತ್ತ, ಯ್ಯ, ಜ್ಜ
ಹಾಗೂ "ಬೇರೆ ಬೇರೆ ವ್ಯಂಜನಗಳನ್ನು ಹೊಂದಿರುವ ಸಂಯುಕ್ತಾಕ್ಷರಗಳನ್ನು ವಿಜಾತೀಯ ಸಂಯುಕ್ತಾಕ್ಷರಗಳೆಂದು ಕರೆಯಲಾಗುತ್ತದೆ."
ಉದಾ: ಕ್ಯ, ಶ್ರ, ಕ್ಷ, ಜ್ಯೋ, ಸ್ಕ, ಷ್ಣ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ವರ್ಣಮಾಲೆ

ವರ್ಣಮಾಲೆ ಮತ್ತು ಧ್ವನ್ಯಂಗಗಳು ಕನ್ನಡ ವರ್ಣಮಾಲೆ         ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ. ಅವುಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು. •ಸ್ವರಗಳು ಮತ್ತು ಸಂಧ್ಯಕ್ಷರಗಳು (13) •ಯೋಗವಾಹಕಗಳು (2) •ವ್ಯಂಜನಗಳು (34) ಸ್ವರಗಳು: (ಒಟ್ಟು-13) "ಸ್ವತಂತ್ರವಾದ, ಸ್ಪಷ್ಟವಾದ ಉಚ್ಚಾರಣೆಯನ್ನು ಹೊಂದಿರುವ ಅಕ್ಷರಗಳನ್ನು 'ಸ್ವರಗಳು' ಎಂದು ಕರೆಯಲಾಗುತ್ತದೆ." ಕನ್ನಡ ವರ್ಣಮಾಲೆಯಲ್ಲಿ ಒಟ್ಟು 13 ಸ್ವರಗಳಿದ್ದು ಅವುಗಳಲ್ಲಿ ಎರಡು ಅಕ್ಷರಗಳನ್ನು ಸಂಧ್ಯಕ್ಷರಗಳೆಂದೂ ಕರೆಯಲಾಗುತ್ತದೆ. ಅವುಗಳೆಂದರೆ:- ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ       ಸ್ವರಗಳನ್ನು 'ಹ್ರಸ್ವಸ್ವರ' 'ಧೀರ್ಘಸ್ವರ' ಮತ್ತು 'ಸಂಧ್ಯಕ್ಷರ' ಎಂದು ಮೂರು ವಿಧಗಳಾಗಿ ವಿಂಗಡಿಸಬಹುದು. * ಹ್ರಸ್ವಸ್ವರಗಳು:-  ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ಹ್ರಸ್ವಸ್ವರಗಳು ಎನ್ನುವರು.  -ಅವುಗಳೆಂದರೆ- ಅ ಇ ಉ ಋ ಎ ಒ (ಒಟ್ಟು 6) * ಧೀರ್ಘಸ್ವರಗಳು:- ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ಧೀರ್ಘಸ್ವರಗಳು ಎನ್ನುವರು. ಅವುಗಳೆಂದರೆ- ಆ ಈ ಊ ಏ ಐ ಓ ಔ (ಒಟ್ಟು 7) [ಟಿಪ್ಪಣಿ:- ಯಾವುದೇ ಒಂದು ಅಕ್ಷರವನ್ನು ಉಚ್ಚರಿಸಲು ತೆಗೆದುಕೊಳ್ಳುವ ಸಮಯವನ್ನು ಮಾತ್ರೆಗಳಿಂದ ಅಳೆಯಲಾಗುತ್ತದೆ. 'ಅ' ಎಂಬ ಅಕ್ಷರವನ್ನು ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿ...

☼ ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು ☼

☼ ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು ☼ ☼ ಆಂದ್ರಪ್ರದೇಶ 1.ವಿಶಾಖಪಟ್ಟಣ     --  ಭಾಗ್ಯನಗರ,(city of destiny) 2.ವಿಜಯವಾಡ      --  ಗೆಲುವಿನ ಸ್ಥಾನ (place of victory)  3.ಗುಂಟುರು          --  ಮೆಣಸಿನಕಾಯಿಗಳ ನಗರ, ಮಸಾಲೆ ನಗರ ☼ ಉತ್ತರಪ್ರದೇಶ 1.ಆಗ್ರಾ             --  ತಾಜನಗರಿ 2.ಕಾನ್ಪುರ         --  ವಿಶ್ವದ ಚರ್ಮದ ನಗರ, ಉತ್ತರ ಭಾರತದ ಮಾಂಚೆಸ್ಟರ್ 3.ಲಕ್ನೋ          --  ನವಾಬರ ನಗರ (city of nawab's) 4.ಪ್ರಯಾಗ        --  ದೇವರ ಮನೆ 5.ವಾರಾಣಾಸಿ  --  ಭಾರತದ ಧಾರ್ಮಿಕ & ಆಧ್ಯಾತ್ಮಿಕ ನಗರ, ದೀಪಗಳ ನಗರ, ಭೂಮಿಯ ಮೇಲಿರುವಜೀವಂತ    ಹಳೆಯ ನಗರ, ಪವಿತ್ರ ನಗರ ☼ ಗುಜರಾಥ 1. ಅಹಮದಾಬಾದ   --  ಭಾರತದ ಬೋಸ್ಟಾನ್, ಭಾರತದ ಮಾಂಚೆಸ್ಟರ್, 2.ಸೂರತ್          ...