ಈಗಾಗಲೇ 440 ಗೆಜೆಟೆಡ್ ಪ್ರೋಬೆಷನರಿ ಕೆ.ಎ.ಎಸ್ (ವರ್ಗ ಎ ಮತ್ತು ಬಿ) ಹುದ್ದೆಗಳಿಗಾಗಿ ಕೆ.ಪಿ.ಎಸ್.ಸಿ ಸೂಚನೆ ಹೊರಡಿಸಿದೆ. ಈ ಪರೀಕ್ಷೆಯು ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ ಎಂಬ ಮೂರು ಹಂತಗಳನ್ನು ಒಳಗೊಂಡಿರುತ್ತದೆ. ಅವುಗಳ ಬಗ್ಗೆ ತಿಳಿದುಕೊಳ್ಳೊಣ.
ಪೂರ್ವಭಾವಿ ಪರೀಕ್ಷೆ
ಕನ್ನಡ ಆಂಗ್ಲ ಬಾಷೆಯಲ್ಲಿ ಪ್ರಶ್ನೆ ಪತ್ರಿಕೆಗೆ ಉತ್ತರಿಸಬಹುದು.
ಪ್ರಶ್ನೆ ಪತ್ರಿಕೆ 1- 100 ಪ್ರಶ್ನೆಗಳು 200 ಅಂಕಗಳು
- ರಾಷ್ಟ್ರೀಯ/ಅಂತರಾಷ್ಟ್ರೀಯ/ಪ್ರಚಲಿತ ವಿದ್ಯಮಾನಗಳು
- ಮಾನವಿಕ ಶಾಸ್ತ್ರ/ಕಲೆ/ಇತಿಹಾಳ
ಪ್ರಶ್ನೆ ಪತ್ರಿಕೆ 2- 100 ಪ್ರಶ್ನೆ 200 ಅಂಕಗಳು
- ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸಕರ್ಾರದ ಯೋಜನೆಗಳು
- ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಪರಿಸರ ವಿಜ್ಞಾನ/ಸಾಮಾನ್ಯ ಮನೋಶಾಸ್ತ್ರ
ಅರ್ಹತಾ ಪರೀಕ್ಷೆ:-
ಸಾಮಾನ್ಯ ಕನ್ನಡ (2 ಗಂಟೆ ಸಮಯ) ಹಾಗೂ ಸಾಮನ್ಯ ಇಂಗ್ಲೀಷ (2 ಗಂಟೆ ಸಮಯ) ವಿಷಯಗಳಿಗೆ ತಲಾ 150 ಅಂಕಗಳನ್ನು ನಿಗದಿ ಮಾಡಲಾಗಿದ್ದು, ಈ ಎರಡೂ ವಿಷಯಗಳಲ್ಲಿ ಕನಿಷ್ಟ 35 ಅಂಕಗಳನ್ನು ಗಳಿಸುವ ಅಭ್ಯರ್ಥಿಗಳನ್ನಷ್ಟೆ ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ. ಹಾಗೇಯೇ ಇತರ ವಿಷಯಗಳಲ್ಲಿ ಅಧಿಕ ಅಂಕಗಳನ್ನು ಗಳಿಸಿ ಸಾಮಾನ್ಯ ಕನ್ನಡ ಮತ್ತು ಇಂಗ್ಲೀಷನಲ್ಲಿ ಕನಿಷ್ಟ ಅಂಕ ಪಡೆಯದಿದ್ದರೆ ಅಂತಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಪರಿಗಣಿಸಲಾಗುವುದಿಲ್ಲ. ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಉದ್ಯೋಗಾಕಾಂಕ್ಷಿಗಳು ಮುಖ್ಯ ಲಿಖಿತ ಪರೀಕ್ಷೆಯನ್ನು ಕನ್ನಡ ಅಥವಾ ಇಂಗ್ಲೀಷ ಯಾವುದಾದರೂ ಒಂದು ಬಾಷೆಯಲ್ಲಿ ಮಾತ್ರ ಬರೆಯಬಹುದು.
ಮುಖ್ಯ ಪರೀಕ್ಷೆ
ಪ್ರಶ್ನೆ ಪತ್ರಿಕೆ 1 ಪ್ರಬಂದ ಮಾದರಿ-250 ಅಂಕಗಳು ಸಮಯ-3 ಗಂಟೆ
- ರಾಷ್ಟೀಯ ಹಾಗೂ ಅಂತರಾಷ್ಟ್ರೀಯ ಪ್ರಮುಖ ವಿಷಯಗಳು
- ರಾಜ್ಯ ಮತ್ತು ಸ್ಥಳೀಯ ಪ್ರಮುಖ ವಿಷಯಗಳು
ಪ್ರಶ್ನೆ ಪತ್ರಿಕೆ 2 ಸಾಮಾನ್ಯ ಅದ್ಯಯನ 250 ಅಂಕಗಳು ಸಮಯ-3 ಗಂಟೆಗಳು
- ಇತಿಹಾಸ ಮತ್ತು ಸಂಸ್ಕೃತಿ (ಭಾರತ ಮತ್ತು ಕರ್ನಾಟಕ)
- ಸಾಮಾಜಿಕ ಮತ್ತು ರಾಜಕೀಯ ವಿಚಾರದಾರೆ
- ಭಾರತೀಯ ಆರ್ಥಿಕತೆ, ಯೋಜನೆ, ಗ್ರಾಮೀಣಾಭಿವೃದ್ದಿ ಕುರಿತ ದತ್ತಾಂಶ ಸಂಗ್ರಹ ಮತ್ತು ವಿಶ್ಲೇಷಣೆ
ಪ್ರಶ್ನೆ ಪತ್ರಿಕೆ 3 ಸಾಮಾನ್ಯ ಅದ್ಯಯನ 250 ಅಂಕಗಳು ಸಮಯ-3 ಗಂಟೆಗಳು
- ಭೌತಿಕ ಲಕ್ಷಣ ಮತ್ತು ಪ್ರಾಕೃತಿಕ ಸಂಪನ್ಮೂಲ
- ಭಾರತೀಯ ಸಂವಿಧಾನದ ತುಲನಾತ್ಮಕ ಅದ್ಯಯನ
- ಸಾರ್ವಜನಿಕ ಆಡಳಿತ ಮತ್ತು ನಿರ್ವಹಣೆ, ಅಂತರಾಷ್ಟ್ರೀಯ ಸಂಬಂದ
ಪ್ರಶ್ನೆ ಪತ್ರಿಕೆ 4 ಸಾಮಾನ್ಯ ಅದ್ಯಯನ 250 ಅಂಕಗಳು ಸಮಯ-3 ಗಂಟೆಗಳು
- ಭಾರತದ ಅಭಿವೃದ್ದಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ, ಪರಿಣಾಮ, ಸಾರ್ವಜನಿಕ ಜೀವನದಲ್ಲಿ ಮಾಹಿತಿ ತಂತ್ರಜ್ಞಾನ
- ನೈಸರ್ಗಿಕ ವಿಜ್ಞಾನ, ಜೀವ ವಿಜ್ಞಾನ, ಕೃಷಿ ವಿಜ್ಞಾನ, ಆರೋಗ್ಯ ವಿಜ್ಞಾನ ವಿಷಯಗಳಲ್ಲಿ ಆಗುತ್ತಿರುವ ಆಧುನಿಕ ಬದಲಾವಣೆಗಳು ಮತ್ತು ಅಭಿವೃದ್ದಿ.
- ಪರಿಸರ ವೈವಿದ್ಯತೆಯಲ್ಲಿ ಆಗುತ್ತಿರುವ ಬದಲಾವಣೆಗಳು ಹಾಗೂ ಸವಾಲುಗಳು.
ಪ್ರಶ್ನೆ ಪತ್ರಿಕೆ 5 ಸಾಮಾನ್ಯ ಅದ್ಯಯನ 250 ಅಂಕಗಳು ಸಮಯ-3 ಗಂಟೆಗಳು
- ನೀತಿ ಶಿಕ್ಷಣ
- ಸಮಗ್ರತೆ
- ಅಪ್ಟಿಟ್ಯೂಡ (ಅಬಿಕ್ಷಮತೆ)
ಪ್ರಶ್ನೆ ಪತ್ರಿಕೆ 6 ಐಚ್ಚಿಕ ವಿಷಯ ಪತ್ರಿಕೆ-1, 250 ಅಂಕಗಳು ಸಮಯ-3 ಗಂಟೆಗಳು.
ಪ್ರಶ್ನೆ ಪತ್ರಿಕೆ 7 ಐಚ್ಚಿಕ ವಿಷಯ ಪತ್ರಿಕೆ-2, 250 ಅಂಕಗಳು ಸಮಯ-3 ಗಂಟೆಗಳು
ವ್ಯಕ್ತಿತ್ವ ಪರೀಕ್ಷೆ (ಪರ್ಸನಾಲಿಟಿ ಟೆಸ್ಟ್)
ವ್ಯಕ್ತಿತ್ವ ಪರೀಕ್ಷೆಯು ಅಭ್ಯರ್ಥಿಗಳ ವಯಕ್ತಿಕ ಗುಣಮಟ್ಟ ಮತ್ತು ಸಿವಿಲ್ ಸೇವೆಗಳಿಗೆ ಸೂಕ್ತರೇ ಎಂಬ ಬಗ್ಗೆ ಅಂದರೆ ನಾಯಕತ್ವದ ಗುಣ ತಿರ್ಮಾಣ ತೆಗೆದುಕೊಳ್ಳುವ ಸಾಮಥ್ರ್ಯ , ವಿವಿಧ ಮತ್ತು ಆಳವಾದ ಆಸಕ್ತಿ ಒಂದು ಗುಂಪಿನಲ್ಲಿ ಕೆಲಸ ಮಾಡುವ ಸಾಮಥ್ರ್ಯ ಮತ್ತು ಪ್ರೇರಣಾ ಕೌಶಲ್ಯ ಹಾಗೂ ತಾರ್ಕಿಕ ಯೋಚನೆಯನ್ನು ಸಾಮಥ್ರ್ಯಗಳ ಬಗ್ಗೆ ನಿರ್ಧರಿಸುತ್ತದೆ. ಆಯೋಗವು ಗ್ರೂಪ್-ಎ ಮತ್ತು ಬಿ ಸೇವೆಗಳ ಖಾಲಿ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ 1:3 ಅನುಪಾತದಲ್ಲಿ ಅಭ್ಯರ್ಥಿಗಳನ್ನು ವ್ಯಕ್ತಿತ್ವ ಪರೀಕ್ಷೆಗೆ ಕರೆಯುತ್ತದೆ. ಅಭ್ಯರ್ಥಿಗಳ ಲಿಖಿತ ಪರೀಕ್ಷೆ (ಮುಖ್ಯ ಪರೀಕ್ಷೆ) ಯಲ್ಲಿ ಪಡೆದ ಒಟ್ಟು ಅಂಕಗಳ ಜೇಷ್ಠತೆ ಹಾಗೂ ಚಾಲ್ತಿಯಲ್ಲಿರುವ ಮೀಸಲಾತಿಯನ್ವಯ ವ್ಯಕ್ತಿತ್ವ ಪರೀಕ್ಷೆಗೆ ಅಹ್ವಾನಿಸುತ್ತದೆ. ವ್ಯಕ್ತಿತ್ವ ಪರೀಕ್ಷೆಯು ಗರಿಷ್ಠ 200 ಅಂಕಗಳನ್ನು ಒಳಗೊಂಡಿರುತ್ತದೆ.
ಲಿಖಿತ ಪರೀಕ್ಷೆ ಒಟ್ಟು 1750+ಸಂದರ್ಶನ 200=1950
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ